ಸುದ್ದಿಲೈವ್/ಶಿವಮೊಗ್ಗ
ರಾಜೇಶ್ ಶೆಟ್ಟಿ ಯಾನೆ ಕಪ್ಡಾ ರಾಜೇಶ್ ರಿಪೇರಿಗೆ ನೀಡಿದ ವಾಹನವನ್ನ ಪಡೆಯಲು ಬಂದಾಗ ಲಾಕ್ ಆಗಿ ಮುಸುಕುಧಾರಿಯಾಗಿ ಬಂದವರ ಕೈಯಲ್ಲಿಹತನಾಗಿದ್ದಾನೆ. ಮುಸುಕುಧಾರಿಗಳ ಪತ್ತೆಗೆ ಪೊಲೀಸ್ ಇಲಾಖೆ ಮೂರು ತಂಡಗಳನ್ನ ರಚಿಸಿದೆ.
ಕಪ್ಡ ರಾಜೇಶ್ ವಿರುದ್ಧ ಸುಮಾರು ಕಳೆದ ನಾಲ್ಕೈದು ತಿಂಗಳ ಹಿಂದೆ ಬೊಮ್ಮನ ಕಟ್ಟೆಯಲ್ಲಿ ಪುರುಷೋತ್ತಮನವರ ಸಾವಿಗೆ ತೆರಳಿದ್ದ ವೇಳೆ ಕರಿಯ ವಿನಯ್ ಮತ್ತು ಕಪ್ಡ ರಾಜೇಶ್ ನಡುವೆ ಜಗಳವಾಗಿತ್ತು. ರಾಜೇಶ್ ಬೊಮ್ಮನ್ ಕಟ್ಟೆಯ ಲಾಸ್ಟ್ ಬಸ್ ಸ್ಟಾಪ್ ನಲ್ಲಿ ಕರಿಯ ವಿನಯ್ ಗೆ ಹೊಡೆದಿದ್ದ ಎಂಬ ಆರೋಪದ ಅಡಿ ವಿನೋಬ ನಗರದ ಪೊಲೀಸ್ ಠಾಣೆಯಲ್ಲಿ ರಾಜೇಶನ ವಿರುದ್ಧ ಹಾಫ್ ಮರ್ಡರ್ ಕೇಸ್ ದಾಖಲಾಗಿತ್ತು.
ಈ ಗಲಾಟೆಯೇ ದೊಡ್ಡದಾಗಿ ರಾಜೆಶ್ ಮರ್ಡರ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಇಂದು ಸುಮಾರು 12-30 ಕ್ಕೆ ಹೀರೋ ಹೊಂಡ ಸ್ಪ್ಲೆಂಡರ್ ಗಾಡಿಯನ್ನ ಬೊಮ್ಮನ್ ಕಟ್ಟೆಯ ಮುಖ್ಯ ರಸ್ತೆಯಲ್ಲಿ ಅರ್ಜುನ್ ಆಟೋ ವರ್ಕ್ಸ್ ನಲ್ಲಿ ಬಿಟ್ಟಿದ್ದ ರಾಜೇಶ್ ಪಡೆಯಲು ಬಂದಿದ್ದಾನೆ. ಪಕ್ಕದಲ್ಲಿದ್ದ ಬೇಕರಿಗೆ ಹೋಗಿ ಜ್ಯೂಸ್ ಕುಡಿಯಲು ಮುಂದಾದಾಗ ಮುಸುಕುದಾರಿಯಾಗಿ ಬಂದ ಮೂರರಿಂದ ಆರು ಜನ ಆತನನ್ನ ಲಾಕ್ ಮಾಡಿಕೊಂಡು ಅಂಗಾತ ಮಲಗಿಸಿದ್ದಾರೆ. ಆತನ ಹಿಂಭಾಗದಲ್ಲಿ ಇಂಟು ಮಾರ್ಕ್ ಹಾಕಲಾಗಿದೆ. ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.
ರಾಜೇಶ್ ತನ್ನ ಸ್ಟೇಟಸ್ ಗಳನ್ನ ಇತ್ತೀಚೆಗೆ ಪ್ರತಿದಿನ ಬದಲಾಯಿಸುತ್ತಿದ್ದ ಎಂಬ ಅರೋಪವೂ ಕೇಳಿ ಬಂದಿದೆ. ನವುಲೆ ಆನಂದನ ಸಚಹಚರನಾದ ಕಪ್ಡ ರಾಜೇಶ್ ಎದುರಾಳಿಯ ವಿರುದ್ಧ ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದ ಎಂಬ ಆರೋಪಗಳು ಇವೆ. ಸ್ಟೇಟಸ್ ಬದಲಾವಣೆಯೂ ಆತನ ಕೊಲೆಗೆ ಕಾರಣ ಎಂಬ ವದಂತಿಗಳು ಹರಡಿದರೂ ನಾಲ್ಕೈದು ತಿಂಗಳ ಹಿಂದಿನ ಘಟನೆಯೇ ಆತನ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಎಫ್ ಐಆರ್ ಏನಾಗಲಿದೆ ಎಂಬುದನ್ನ ಕಾದು ನೋಡೋಣ