ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಭದ್ರಾಪುರದ ತುಂಗ ನದಿಗೆ ವ್ಯಕ್ತಿಯೊಬ್ಬ ಹಸು ತೊಳೆಯಲು ಹೋಗಿದ್ದು, ನೀರಿನಲ್ಲಿ ಕಾಣೆಯಾಗಿದ್ದು ಆತನಿಗಾಗಿ ಶೋಧಕಾರ್ಯ ನಡೆದಿದೆ.
ಅಶ್ರಫ್ ಎಂಬ 42 ವರ್ಷದ ವ್ಯಕ್ತಿ ಭದ್ರಪುರದಲ್ಲಿ ತುಂಗಾ ನದಿಯಲ್ಲಿ ಹಸು ತೊಳೆಯಲು ಹೋಗಿ ಕಾಣೆಯಾಗಿದ್ದಾನೆ ಎಂದು 112 ಕಂಟ್ರೋಲ್ ರೂಮ್ ಗೆ ಕರೆ ಬಂದಿದೆ. ಶಿವಮೊಗ್ಗ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಸದರಿಯವರ ಶೋಧನಾ ಕಾರ್ಯ ನಡೆಸುತ್ತಿದ್ದಾರೆ.