Girl in a jacket

ಕಾನೂನು ಸಂಘರ್ಷಕ್ಕೊಳಗಾದವರಿಂದ ಮನೆಗೆ ನುಗ್ಗಿ ದರೋಡೆ


ಸುದ್ದಿಲೈವ್/ಶಿವಮೊಗ್ಗ

77 ವರ್ಷದ ವೃದ್ಧೆಯ ಮನೆಗೆ ತೆರಳಿ ನೀರು ಕೇಳುವ ನೆಪದಲ್ಲಿ ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಿದ್ದ ಕಾನುನು ಸಂಘರ್ಷಕ್ಕೊಳಗಾದ ಬಾಲಕರನ್ನ ವಿನೋಬ ನಗರ ಪೊಲೀಸರು ಬಂಧಿಸಿ ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ. 

ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯ ಬಳಿಗೆ ಹೋದ ಕಾನೂನು ಸಂಘರ್ಷಕ್ಕೊಳಗಾದ ಯುವಕರು ಆಕೆಯ ಬಾಯಿ ಮುಚ್ಚಿ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಿದ್ದರು. 

ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಕಾರಿಯಪ್ಪ ಎ, ಜಿ, ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್ ಎಂ, ಮೇಲ್ವಿಚಾರಣೆಯಲ್ಲಿ, ವಿನೋಬ ನಗರ ಠಾಣೆಯ ಪ್ರಭಾರಿ ಪಿಐ ಸಿದ್ದೇಗೌಡರವರ ನೇತೃತ್ವದ, ಪಿಎಸ್ಐ ಸುನಿಲ್ ಬಿ.ಸಿ, ಹಾಗೂ ಸಿಬ್ಬಂಧಿಗಳಾದ ಸಿಪಿಸಿ ರಾಜು ಕೆ ಆರ್, ಚಂದ್ರನಾಯ್ಕ್, ಮಲ್ಲಪ್ಪ ಎಸ್.ಜಿ ಮತ್ತು ಅರುಣ ಕುಮಾರ್ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.               

ತನಿಖಾ ತಂಡವು ಇಂದು  ಪ್ರಕರಣದಲ್ಲಿ 04 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು,  ಪ್ರಕರಣದಲ್ಲಿ ಕಿತ್ತುಕೊಂಡು ಹೋದ ಅಂದಾಜು ಮೌಲ್ಯ 65,000/-  ರೂಗಳ 10 ಗ್ರಾಂ 700 ಮಿಲಿ ತೂಕದ ಚಿನ್ನದ ಸರವನ್ನು ಅಮಾನತ್ತು ಪಡಿಸಿಕೊಂಡಿದೆ.  

ತನಿಖಾ ತಂಡವು ಪ್ರಕರಣ ವರದಿಯಾದ ಕೇವಲ 24 ಗಂಟೆಗಳ ಒಳಗಾಗಿ ಸದರಿ ಪ್ರಕರಣವನ್ನು ಪತ್ತೆ ಮಾಡಿದ್ದು, ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close