ಸುದ್ದಿಲೈವ್/ಶಿವಮೊಗ್ಗ
ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ತೀರ್ಥಹಳ್ಳಿ, ಜೋಗ, ಶಿರಾಳಕೊಪ್ಪ, ರಿಪ್ಪನ್‌ಪೇಟೆ, ಕುಂಸಿ, ಹೊಳೆಹೊನ್ನೂರು ಮತ್ತು ಹಾರನಹಳ್ಳಿ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿಯಿರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯ ನಡೆಯಲಿದೆ.
ನ.25 ರಂದು ಬೆಳಗ್ಗೆ 9.30 ರಿಂದ ಸಂಜೆ 5.00 ರವರೆಗೆ ಶಿವಮೊಗ್ಗದ ಡಿ.ಎ.ಆರ್. ಆವರಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಡಿ.ಡಿ.ಪಿ.ಐ ಮತ್ತು ಸಮಾದೇಷ್ಟರು ಇವರುಗಳ ಸಮ್ಮುಖದಲ್ಲಿ ಸದಸ್ಯರ ಆಯ್ಕೆ ಪ್ರಕ್ರಿಯ ನಡೆಯಲಿದೆ. ನೊಂದಣಿಯಾದ ಎಲ್ಲಾ ಸದಸ್ಯರು ಪೊಲೀಸ್ ಇಲಾಖೆಯೊಂದಿಗೆ ಕಾನೂನು ಮತ್ತು ಶಿಸ್ತುಪಾಲನಾ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಎಲ್ಲಾ ಸದಸ್ಯರಿಗೂ ಮೂಲಕ ತರಬೇತಿಯನ್ನು ಜಿಲ್ಲಾ ಮಟ್ಟದಲ್ಲಿ ನೀಡಲಾಗುತ್ತದೆ. ಪ್ರಗತಿಪರ ತರಬೇತಿಯನ್ನು ಗೃಹರಕ್ಷಕ ಮತ್ತು ಪೌರರಕ್ಷಣ ಅಕಾಡೆಮಿ ಬೆಂಗಳೂರಿನಲ್ಲಿ ನೀಡಲಾಗುತ್ತೆ.
ಸಮಾಜದ ಸೇವೆಗೆ ತಮ್ಮನ್ನು ಮುಡಿಪಾಗಿಡಲು ಕಟಿಬದ್ಧರಾಗಿರುವ ಯುವಕ/ಯುವತಿಯರು ಈ ಅವಕಾಶದ ಉಪಯೋಗಪಡೆದುಕೊಳ್ಳುವಂತೆ ಜಿಲ್ಲಾ ಗೌರವ ಸಮಾದೇಷ್ಠರಾದ ಡಾ. ಚೇತನ ಹೆಚ್.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್‌ಷನ್, 2ನೇ ಮಹಡಿ, ಗಾಂಧಿನಗರ ಮುಖ್ಯರಸ್ತೆ, ಶಿವಮೊಗ್ಗ, ದೂ.ಸಂ.: 08182-295630 ನ್ನು ಸಂಪರ್ಕಿಸುವುದು.