ಸುದ್ದಿಲೈವ್/ತೀರ್ಥಹಳ್ಳಿ
ತೀರ್ಥಹಳ್ಳಿಯ ರಾಮೇಶ್ವರ ದೇವಸ್ಥಾನದ ಹಿಂಬಾಗದಲ್ಲಿ ಹರಿಯುವ ತುಂಗಾ ನದಿಯ ದಡದಲ್ಲಿ ಚಪ್ಪಲಿ, ಮೊಬೈಲ್ ಬಿಟ್ಟು ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಮೊಬೈಲ್ ಆಧಾರದ ಮೇರೆಗೆ ಅವರು ಬ್ಯಾಂಕ್ ಮ್ಯಾನೇಜರ್ ಎಂದು ತಿಳಿದು ಬಂದಿದೆ.
ತಾಲೂಕಿನ ಅರಳಸುರುಳಿಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ನಾಪತ್ತೆಯಾಗಿದ್ದು ತುಂಗಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ತುಂಗಾ ನದಿಯಲ್ಲಿ ಅಗ್ನಿಶಾಮಾಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದು ಹುಡುಕಾಟ ನಡೆಸುತ್ತಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಒಬ್ಬರೇ ಇದ್ದರು ಎಂದು ಹೇಳಲಾಗುತ್ತಿದ್ದು ಸಂಬಂಧಿಕರು ಆಂಧ್ರ ಪ್ರದೇಶದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿದ್ದರು ಅದಕ್ಕೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ.
ಮೊಬೈಲ್ ಮತ್ತು ಅವರ ಚಪ್ಪಲಿಯ ಆಧಾರದ ಮೇರೆಗೆ ಇವರನ್ನ ಸಧ್ಯಕ್ಕೆ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶ್ರೀವತ್ಸ ಎಂದು ಗುರುತಿಸಲಾಗಿದೆ. ಇವರು ಇಲ್ಲಿ ಬಂದು ಯಾಕೆ ನದಿಗೆ ಇಳಿದರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ. ಆದರೆ ಇವರು ಇಳಿದಿರುವ ಕಡೆಯಲ್ಲಿ ಸುಮಾರು ಜನ ನೀರುಪಾಲಾದವರು ಜೀವಂತವಾಗಿ ಮೇಲೆ ಬಂದ ಉದಾಹರಣೆಗಳೆ ಇಲ್ಲ.
ಕಳೆದ ವರ್ಷ ತೀರ್ಥಹಳ್ಳಿ ಜಾತ್ರೆಗೆ ಟೆಂಟ್ ಹಾಕಲು ಬಂದಿದ್ದ ಬೇರೆ ರಾಜ್ಯದ ವ್ಯಕ್ತಿ ಇದೇ ಜಾಗದಲ್ಲಿ ಮುಳುಗಿದ್ದವನು ಹೆಣವಾಗಿ ಪತ್ತೆಯಾಗಿದ್ದನು. ಇತ್ತೀಚೆಗೆ ಸ್ನಾನಕ್ಕೆ ಇಳಿದಿದ್ದ ಇಬ್ಬರು ಬಾಲಕರು ಸಹ ಹೆಣವಾಗಿ ಪತ್ತೆಯಾಗಿದ್ದರು.
ಆಶ್ರಫ್ ಶವ ಪತ್ತೆ
ಭದ್ರಾಪುರದ ತುಂಗನದಿಯಲ್ಲಿ ಗೋವಿನ ಮೈ ತೊಳೆಯಲು ಹೋಗಿದ್ದ ಆಶ್ರಫ್ (42) ಶವವಾಗಿ ಪತ್ತೆಯಾಗಿದ್ದಾನೆ. ಇಂದು ಬೆಳಿಗ್ಗೆ ಆತ ನದಿಗೆ ಹಾರಿದ ಜಾಗದಿಂದ 20 ಗಜದಲ್ಲಿ ಆತನ ಶವವನ್ನ ಅಗ್ನಿಶಾಮಕ ದಳ ಪತ್ತೆ ಮಾಡಿದ್ದಾರೆ.