ಸುದ್ದಿಲೈವ್/ಶಿವಮೊಗ್ಗ
ವಿಹೆಚ್ ಪಿ ಮತ್ತು ಆರ್ ಎಸ್ ವಿಷಕಾರಿ ಹಾವು ಅದನ್ನ ಕೊಲ್ಲಿ ಎಂದು ಮಲ್ಪಿಕಾರ್ಜುನ ಖರ್ಗೆ ಹೇಳಿರುವುದಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್ ಎಸ್ ಎಸ್ ಸ್ವಯಂ ಸೇವಕರು ಇಲ್ಲವಾಗಿದ್ದರೆ ದೇಶ ಹೇಗಿರುತ್ತಿತ್ತು ಎಂಬ ಕಲ್ಪನೆಯಲ್ಲಿ ಇರಲು ಸಾಧ್ಯನಾ? ದೇಶದ ಪ್ರಜೆಗಳು ಆರ್ ಎಸ್ ಎಸ್ ನ್ನ ಒಪ್ಪಿದ್ದಾರೆ. ಸ್ವಯಂ ಸೇವಕ ಪ್ರಧಾನಿ ಮೋದಿಯನ್ನ ಮೂರನೇ ಕಾಲಾವಧಿಗೆ ಪಿಎಂ ಮಾಡಲಾಗಿದೆ.
ಇದನ್ನ ಸಹಿಸದ ಖರ್ಗೆ ಒಳಗಡೆ ಅಧಿಕಾರದ ದಾಹವಿದೆ ಎಂದು ತೋರ್ಪಡಿಕೆಯಾಗಲಿದೆ. ಜಿಂದೂತ್ವ, ರಾಷ್ಟ್ರೀಯತೆ ಬೆಳೆಸುವ ಆರ್ ಎಸ್ ಎಸ್ ಬಗ್ಗೆ ಕ್ಷಮೆ ಕೇಳಬೇಕು. ವಕ್ಫ್ ಹೆಸರಿನಲ್ಲಿ ಆಸ್ಯಿ ಲೂಟಿಯಾದರೂ ಕಾಂಗ್ರೆಸ್ ಸುಮ್ಮನಿದೆ. 4% ಟೆಂಡರ್ ಗಳಲ್ಲಿ ಮುಸ್ಲೀಂಗೆ ಅವಕಾಶ ನೀಡಲಾಗುತ್ತಿದೆ ಎಂದಿದ್ದೆ ಸಾಧು ಸಂತರ ನೇತೃತ್ವದಲ್ಲಿ ದಂಗೆ ಏಳುವ ಪರಿಸ್ಥಿತಿ ಇದೆ ಎಂದಿದ್ದೆ.
ಸುಮೋಟೋ ಹಾಕಲಾಯಿತು. ನನ್ನ ಮೇಲೆ ನೂರು ಕೇಸು ಹಾಕಿ ಆದರೆ ಖರ್ಗೆ ವಿರುದ್ಧ ಏನು ಕ್ರಮ ಎಂದು ಪ್ರಶ್ನಿಸಿದರು. ಕೊಲ್ಲಿ ಎಂದು ಹೇಳಲೇ ಇಲ್ಲ. ಆದರೆ ಸುಮೋಟೋ ಹಾಕಿದಮೇಲೆ ಕಾಂಗ್ರೆಸ್ ಹೋರಾಟಕ್ಕೆ ಇಳಿಯುತ್ತೆ. ಅಂಬೇಡ್ಕರ್ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮವೇನು ಎಂದು ಪ್ರಶ್ನಿಸಿದ ಅವರು ರಾಜಕಾರಣ ಮಾಡಲು ಕಾಂಗ್ರೆಸ್ ಗೆ ಬಾರದೆ ಇರುವ ಕಾರಣದಿಂದ ಅದು ನೆಲಕಚ್ಚುತ್ತಿದೆ ಎಂದರು.
ಪ್ರಭಂಜನಾಚಾರ್ಯರಿಗೆ ಕನಕ ಪ್ರಶಸ್ತಿ ನೀಡಲಾಗಿದೆ. ತಿಂಥಣಿಯ ಸಿದ್ದರಾಮಯ್ಯ ಸ್ವಾಮಿಜಿಗಳು ಕಾಂಗ್ರೆಸ್ ಗೆ ಜಾತಿಗಣತಿ ತನ್ನಿ ಎಂದು ಹೇಳಿದ್ದಾರೆ. ಹಿಂದೂಗಳನ್ನ ಟೂಲ್ ಕಿಟ್ ಮಾಡಿಕೊಂಡಿದ್ದೀರಾ? ಕ್ಯಾಬಿನೆಟ್ ನಲ್ಲಿಟ್ಟು ಪಾಸ್ ಮಾಡುವುದಾಗಿ ಹೇಳಿದ್ದರು. ಅದು ಏನಾಯಿತು? ಎಂದು ಪ್ರಶ್ನಿಸಿದ ಈಶ್ವರಪ್ಪ ಜಾತಿಗಣತಿಯನ್ನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡ್ರಿ ಈಗ ಮಹಾರಾಷ್ಟ್ರದಲ್ಲಿ ಜಾತಿಗಣತಿ ಜಾರಿತರುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಸಿದ್ದಾರಾಮಯ್ಯ ಅಹಿಂದ ಸಮಾವೇಶ ಮಾಡುವುದಾಗಿ ಹೇಳಿದ್ದಾರೆ. ಮೊದಲು ಜಾತಿ ಗಣತಿ ನಡೆಸಿ ನಂತರ ಸನಾವೇಶ ಮಾಡಿ. ಕ್ಯಾಬಿನೆಟ್ ನಲ್ಲಿ ಮಂಡಿಸಿ ನಂತರ ಚರ್ಚೆಗೆ ಇಡಿ ಎಂದು ಸಲಹೆ ನೀಡಿದರು.
ನನ್ನ ವಿರುದ್ಧ ಯಾವುದೇ ಪೋಕ್ಸೋ ಕೇಸು ಇಲ್ಲ ಎಂದು ಪರೋಕ್ಷವಾಗಿ ಬಿಎಸ್ ವೈಗೆ ನೇರವಾಗಿ ಟಾಂಗ್ ನೀಡಿದ ಈಶ್ವರಪ್ಪ ರಾಜಕಾರಣಿಗಳು ಎಲ್ರೂ ಒಂದೇ ಎಂದು ತಿಳ್ಕೊಬೇಡಿ, ಕೆಂಪಯ್ಯ ಕಾಂಗ್ರೆಸ್ ಎಜೆಂಟ್ ಎಂದು ಸಾಬೀತಾಗಿದೆ. ಅವರ ವರದಿಯಲ್ಲೇ ಬಿಜೆಪಿ ಸರ್ಕಾರದಲ್ಲಿ 40% ನಡೆದಿಲ್ಲ ಎಂದು ವರದಿ ಮಾಡಿದ್ದಾರೆ. ಡಿಸಿಎಂ ಮತ್ತು ಸಿಎಂ ಕ್ಷಮೆ ಕೇಳಬೇಕು ಎಂದರು.