Girl in a jacket

ಫೆ.4 ರಂದು ಕ್ರಾಂತಿವೀರ ಬ್ರಿಗೇಡ್ ಲೋಕಾರ್ಪಣೆ



ಸುದ್ದಿಲೈವ್/ಶಿವಮೊಗ್ಗ

ಮಾಜಿ ಡಿಸಿಎಂ ಈಶ್ವರಪ್ಪನವರ ಕನಸಿನ ಕೂಸಾಗಿರುವ ಬ್ರಿಗೇಡ್ ಗೆ ಹೆಸರಿಡಲಾಗಿದೆ. ರಾಯಣ್ಣ ಬ್ರಿಗೇಡ್ ಎಂದು ಹೆಸರಿನ ಅಡಿ ಈ ಹಿಂದೆ ನಾಮಕರಣಗೊಂಡಿದ್ದ ಬ್ರಿಗೇಡ್ ಈಗ ಕ್ರಾಂತಿ ವೀರ ಬ್ರಿಗೇಡ್ ಎಂಬ ಹೆಸರಿನ ಅಡಿಯಲ್ಲಿ ಹೊರಬೀಳುತ್ತಿದೆ. 

ನಿರೀಕ್ಷೆಗೂ ಮೀರಿ ಕ್ರಾಂತಿ ವೀರ ಬ್ರಿಗೇಡ್ ಗೆ ಜನ ಸೇರಲು ತುದಿಗಾಲಿನಲ್ಲಿರುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಇದನ್ನ  ಫೆ.04 ರಂದು ಬಸವನ ಬಾಗೇವಾಡಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ, 1000 ಜನ ಸಾಧುಸಂತರ ಕಾಲು ತೊಳೆಯುವ ಮೂಲಕ  ಲೋಕರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಬ್ರಿಗೇಡ್ ಸಮಿತಿ ಡಿ.2 ರಂದು ನಡೆಯಲಿದೆ. ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ನಡೆಯಲಿದೆ. ಅದನ್ನ ಫೆ.4 ರಥಸಪ್ತಮಿ ದಿನ ಲೋಕಾರ್ಪಣೆಗೊಳಿಸಿ ಅಲ್ಲಿಂದ ಬ್ರಿಗೇಡ್ ನ ಕಾರ್ಯಕ್ಷಮತೆ ಆರಂಭವಾಗಲಿದೆ ಎಂದರು. 

ಸನಿತಿ ರಚನೆಯ ವೇಳೆ ವಕ್ಫ್ ಆಸ್ತಿ ಏನಿದೆ? ಪಹಣಿಯಿಂದ ಕಿತ್ತುಹಾಕಬೇಕು ಎಂಬ ಆಗ್ರಹಿಸಲಾಗುವುದು ಸಾಧು ಸಂತರು ಒಪ್ಪಲಿದ್ದಾರೆ. ಪಹಣಿಯಲ್ಲಿ ವಕ್ಫ್ ಎಂಬ ಹೆಸರು ಕಿತ್ತು ಬಿಸಾಕುವರೆಗೆ ಹೋರಾಟ ನಡೆಯಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close