ಸುದ್ದಿಲೈವ್/ಶಿವಮೊಗ್ಗ
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. ಮೂರು ಕ್ಷೇತ್ರದಲ್ಲಿ ಎನ್ ಡಿಎ ಬೆಂಬಲಿತ ಅಭ್ಯರ್ಥಿ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾತಾವರಣ ಚನ್ನಾಗಿತ್ತು ಜನರು ಒಳ್ಳೆಯ ಬೆಂಬಲ ಕೊಡ್ತಿದ್ದಾರೆ. ವಕ್ಪ್ ಬೋರ್ಡ್ ವಿರುದ್ದ ಬಿಜೆಪಿ ಕಮಿಟಿ ರಚನೆ ಮಾಡಲಾಗಿದೆ. ಈ ಕಮಿಟಿ ರಾಜ್ಯದಲ್ಲಿ ಪ್ರವಾಸ ಮಾಡಿ ವರದಿ ಕೊಡಲಿದೆ ಎಂದರು.
ವರದಿ ನಂತರ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲಾಗುವುದು. ಕೋವಿಡ್ ಸಂಧರ್ಭದಲ್ಲಿ ಬಿಜೆಪಿ ಭ್ರಷ್ಠಾಚಾರವೆಸಗಿದೆ ಎಂದು ಕಾಂಗ್ರೆಸ್ ಎಸ್ ಐಟಿ ರಚಿಸಿದೆ. ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ಯಾವುದೇ ಏರುಪೇರಾಗಿಲ್ಲ. ಆದರೆ ದುರುದ್ದೇಶದಿಂದ ಎಸ್ ಐಟಿ ರಚನೆ ಮಾಡಲಾಗಿದೆ ಎಂದರು.
ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ. ಕೋವಿಡ್ ಸಮಯದಲ್ಲಿ ಜನರ ಪ್ರಾಣ ಉಳಿಸುವ ಕೆಲಸ ಮಾಡಿದ್ದೇವೆ. ಜನರ ಡೈವರ್ಟ್ ಮಾಡಲು ಹಗರಣ ನಡೆದಿದೆ ಎಂಬ ಮಾತು ಹೇಳ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸರಕಾರ ಬೀಳಿಸುವ ವಿಚಾರ
ಸರಕಾರ ಬೀಳಿಸುವ ಕೆಲಸ ಯಾರು ಮಾಡ್ತಿಲ್ಲ. ಪೂರ್ಣ ಬಹುಮತ ಹೊಂದಿರುವ ಸರ್ಕಾರವನ್ನ ಬೀಳಿಸುವುದು, ಹುಚ್ಚುತನದ ಪರಮಾವಧಿ ಎಂದ ಅವರು ಬಿಜೆಪಿ ಶಾಸಕರನ್ನು ಯಾರು ಕರೆಯುತ್ತಿಲ್ಲ. ಕಾಂಗ್ರೆಸ್ ಶಾಸಕರನ್ನು ಯಾರು ಕರೆಯುತ್ತಿಲ್ಲ