Girl in a jacket

ನಗರ ಹೋಬಳಿ ಆಸ್ಪತ್ರೆಯ ಮುಂದೆ ಬಿಜೆಪಿ ದಿಡೀರ್ ಪ್ರತಿಭಟನೆ

 


ಸುದ್ದಿಲೈವ್/ಶಿವಮೊಗ್ಗ

ಹೊಸನಗರ ತಾಲೂಕು ನಗರ ಹೋಬಳಿಯಲ್ಲಿ ಬಿಜೆಪಿ ತಾಲೂಕು ಘಟಕ ದಿಡೀರ್ ಎಂದು ಪ್ರತಿಭಟನೆ ನಡೆಸಿ ಹಲವು ಲೋಪ ದೋಷಗಳನ್ನ ಸರಿಪಡಿಸಬೇಕು ಇಲ್ಲ ಅಮರಣಾಂತಿಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಲ್ಯಾಬ್ ಟೆಕ್ನಿಷಿಯನ್ ಕೊರತೆ, ನಾಲ್ಕುದಿನಗಳಿಂದ ವೈದ್ಯರ ಅಲಭ್ಯತೆ ಉಂಟಾಗಿದೆ, ಅಪಘಾತ ಸಂಭವಿಸಿದರೆ ರೋಗಿಗಳಿಗೆ ಟಿಂಚರ್ ಹಾಕುವ ಗೋಜಿಗೆ ಹೋಗಿಲ್ಲವೆಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಸರ್ಕಾರವಿದ್ದಾಗ ನಗರ ಹೋಬಳಿಯ 24×7 ಆಸ್ಪತ್ರೆಗೆ ಮೂವರು ವೈದ್ಯರನ್ನ ನೇಮಿಸಲಾಗಿತ್ತು.ಇಲ್ಲಿ ಇರುವ ಆಂಬ್ಯುಲೆನ್ಸ್ ಪಂಚರ್ ಆಗಿ ನಾಲ್ಕು ದಿನಗಳಿಂದ ನಿಂತಿದ್ದರೂ ಪಂಚರ್ ಹಾಕುವ ಗೋಜಿಗೆ ಹೋಗಿಲ್ಲ ಎಂದು ಪದರತಿಭಟನಾಕಾರರು ಆರೋಪಿಸಿದ್ದಾರೆ.

ನಗರದ ನಿತಿನ್ ಮಾತನಾಡಿ, ನೋವಿನಿಂದ ಪ್ರತಿಭಟಿಸಲಾಗುತ್ತಿದೆ ನಗರ ಪ್ರವಾಸೋದ್ಯಮ ವಾಗಿ ಬೆಳೆದಿದೆ. ಹೋಬಳಿಕೇಂದ್ರದ ಆಸ್ಪತ್ರೆಯಾಗಿದೆ. ಒಬ್ಬ ವೈದ್ಯರು ಇಲ್ಲ. ಅಸಡ್ಡೆ ಉತ್ತರಗಳನ್ನ ವೈದ್ಯಾಧಿಕಾರಿಗಳು ನೀಡುತ್ತಾರೆ.

ಇಲ್ಲಿನ ಲ್ಯಾಬ್ ಟೆಕ್ನಿಷಿಯನ್ ಗಳನ್ನ ಕಾರಣವಿಲ್ಲದೆ ಹುಂಚಕ್ಕೆ ವರ್ಗಾಯಿಸಲಾಗಿದೆ.‌ ಹಾಗಾದರೆ ನಗರ ಹೋಬಳಿ ಜನ ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು ಈ ಆಸ್ಪತ್ರೆಗೆ ಇಬ್ಬರು ವೈದ್ಯಾಧಿಕಾರಿಗಳನ್ನ ನೇಮಿಸಬೇಕು, ಲ್ಯಾಬ್ ಟೆಕ್ನಿಷಿಯನ್ ಅವರನ್ನ ನೇಮಿಸಬೇಕು. ಅಂಬ್ಯುಲೆನ್ಸ್ ನ್ನ ಸಯವ್ಯವಸ್ಥೆಯಲ್ಲಿಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ  ಸುಭ್ರಹ್ಮಣ್ಯ ಮತ್ತಿಮನೆ, ರಮಕಾಂತ್, ಕುಮಾರ್ ಕೆ ಬಿ, ಕೆ ವಿ ಕೃಷ್ಣಮೂರ್ತಿ, ಅರುಣ್, ಮಧುಕರ್ ಶೆಟ್ಟಿ, ಸುರೇಶ್ ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close