ಸುದ್ದಿಲೈವ್/ಶಿವಮೊಗ್ಗ
ಟ್ರಾಫಿಕ್ ಪೊಲೀಸರ ವಸೂಲಿ ಕಾರ್ಯ ಮುಂದುವರೆದಿದೆ. ವಿದ್ಯಾನಗರದಲ್ಲಿ ಮೂಲೆಯಲ್ಲಿ ಕುಳಿತು ವ್ಯಕ್ತಿಯೊಬ್ಬರಿಗೆ ನಿಮ್ಮ ವಾಹನ ಹೈಸ್ಪೀಡ್ ಆಗಿದೆ ಎಂದು ತಡೆದು ದಂಡ ವಸೂಲಿಗೆ ಮುಂದಾಗಿದ್ದಾರೆ. ಈ ಬಗ್ಗೆ ಆಕ್ಷೇಪಣೆಗಳ ಸುರಿಮಳೆ ಕೇಳಿ ಬಂದಿದೆ.
ಟ್ರಾಫಿಕ್ ಪೊಲೀಸರ ದಂಡ ವಸೂಲಿ ಎಂಬುದು ದಂಧೆಯಾಗಿದೆ ಎಂದು ಈ ಹಿಂದೆ ಸುದ್ದಿಲೈವ್ ಸುಧೀರ್ಘ ಸುದ್ದಿ ಮಾಡಿತ್ತು. ಆ ವ್ಯವಹಾರಕ್ಕೆ ಬ್ರೇಕ್ ಹಾಕಲು ಜನಜಾಗೃತಿ ಮೂಡಿಸಲಾಗಿತ್ತು. ಆದರೆ ಪೊಲೀಸರ ವಿರುದ್ಧ ಕುಸ್ತಿ ಮಾಡಲು ಜನಸಾನಾನ್ಯರಿಗೆ ಸಾಧ್ಯವಾ? ಅಸಾಧ್ಯ ಹಾಗಾಗಿ ಈ ಅವ್ಯವಸ್ಥೆಯ ವಿರುದ್ಧ ತಕ್ಕಮಟ್ಟಿನ ಜಾಗೃತಿಯನ್ನ ಸುದ್ದಿಲೈವ್ ಮಾಡುತ್ತಿದೆ.
ಸಮಸ್ಯೆ ಉಲ್ಬಣಕ್ಕೆ ಕಾರಣ ಮಿನಿಟ್ ಮೇಲೆ ಬರುವ ಪೊಲೀಸ್ ಅಧಿಕಾರಿಗಳ ದರ್ಬಾರ್ ನಿಂದ ಅವ್ಯವಸ್ಥೆಯಾಗುತ್ತಿದೆ. ಮಿನಿಟ್ ಅಂದರೆ ಹಣ, ಶಾಸಕರು, ಪ್ರಭಾವಿ ವ್ಯಕ್ತಿಗಳು, ಸಚಿವರಿಂದಲು ನಿಗದಿತ ಠಾಣೆಗೆ ಪ್ರಭಾವಿ ವ್ಯಕ್ತಿಗಳ ಹೆಸರನ್ನ ಹಾಕಿಕೊಂಡು ಬರಬಹುದಾಗಿದೆ. ಮಿನಿಟ್ ಮೇಲೆ ವರುವ ಅಧಿಕಾರಿಗಳು ಸುಮ್ಮನೆ ಜನರ ಕಾಳಜಿಗೆ ಒಪ್ಪಿಕೊಂಡು ಬಂದಿದ್ದರೆ ರಾಮರಾಜ್ಯವೇ ಸ್ಥಾಪಿತಗೊಳ್ಳುತ್ತಿತ್ತು. ಆದರೆ ಹಣಕೊಟ್ಟು ಬರುವ ಸ್ಥಿತಿ ತಲುಪಿದ್ದರಿಂದ ಕಾನೂನು ಸುವ್ಯವಸ್ಥೆ ಮೂರಾಬಟ್ಟೆಯಾಗಿದೆ.
ಯಾರಿಗೋ ಕೆಲಸ ಮಾಡುವಂತಾಗಿದೆ. ಇದು ಎಲ್ಲಾ ಠಾಣೆಯಲ್ಲಿ ಇಲ್ಲ. ಆದರೆ ಟ್ರಾಫಿಕ್ ಠಾಣೆಯಲ್ಲಿ ಈ 'ಸುವ್ಯವಸ್ಥೆ' ಮುಂದುವರೆದಿದೆ. ಹೈಸ್ಪೀಡ್ ಹೋಗದಂತೆ ಊರಿಡಿ ಸಿಸಿ ಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಅದನ್ನ ಬಳಿಸದೆ ಹೈಸ್ಪೀಡ್ ರನ್ನಿಂಗ್ ಮಿಷನ್ ತಂದು ವಾಹನ ಸವಾರರಿಗೆ ಹೆಚ್ಚಿನ ಸ್ಪೀಡ್ ನಲ್ಲಿ ಬರುವವರಿಗೆ ದಂಡ ಎಂದು ಹೆಸರಿಸುವ ಹೊಸ ರೀತಿಯ ದಂಡ ಪ್ರಯೋಗಗಳನ್ನ ಹಾಕಲಾಗುತ್ತಿದೆ.
ಈ ರೀತಿಯ ದಂಡಕ್ಕೆ ಇಲಾಖೆ ಹೆಚ್ಚಿನ ಸಮಯದಲ್ಲಿ ತೊಡಗುತ್ತಿವೆ ಎಂಬುದೇ ಆರೋಪವಾಗಿದೆ. ಇತರೆ ಕೆಲಸಗಳಿಗೆ ಹೆಚ್ಚಿನ ಸಮಯ ನೀಡಿ ಜಾಗೃತಿಯನ್ನ ಹೆಚ್ಚಿಸಿದ್ದರೆ ಯಾವುದೇ ಅವ್ಯವಸ್ಥೆಗಳನ್ನ ಸುಧೀರ್ಘವಾಗಿ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. ಸುವ್ಯವಸ್ಥೆಯಾಗುತ್ತಿಲ್ಲವೆಂಬುದಕ್ಕೆ ಉದಾಹರಣೆಗಳಿವೆ.
ಉದಾಹರಣೆಗೆ ಇತ್ತೀಚೆಗೆ ಆಟೋ ಚಾಲಕರು ಹೆಚ್ಚಿನ ದರವನ್ನ ನಿಗದಿಪಡಿಸಿಕೊಂಡರು. ಆದರೆ ಮೀಟರ್ ಕಡ್ಡಾಯ ಮಾಡಲಾಯಿತು. ಮೀಟರ್ ಕಡ್ಡಾಯದ ಬಗ್ಗೆ ಜಾಗೃತಿ ಸಹ ಮಾಡಲಾಯಿತು. ಆದರೆ ಪರಿಣಾಮ ಶೂನ್ಯವಾಯಿತು. ಯಾವ ಆಟೋದವನು ಸಹ ಮೀಟರ್‌ನ್ನ ಹಾಕುತ್ತನೇ ಇಲ್ಲ. ಪ್ರೀಪೇಯ್ಡ್ ಆಟೋ ಎಂಬುದನ್ನ ಇಲಾಖೆ ಹೇಳಿತು. ಕೆಎಸ್ಆರ್ ಟಿಸಿ ಬಳಿ ಪ್ರೀಪೇಯ್ಡ್ ಆಟೋ ಬಳಸಲಿಕ್ಕೆ ಆಗ್ತಾ ಇಲ್ಲ.
2023 ರಲ್ಲಿ ಎಪಿಎಂಸಿ ತರಕಾರಿ ಮಾರ್ಕೆಟ್ ಎದುರು ಫುಟ್ ಪಾತ್ ಮೇಲೆ ಹೂವು ಹಣ್ಣು ತರಕಾರಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಎಲ್ಲಾ ಅಂಗಡಿಗಳನ್ನು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ರವರೆ ಖುದ್ದಾಗಿ ಹೋಗಿ ತೆರವು ಮಾಡಿದ್ದಾರೆ. ಪರಿಣಾಮ ಶೂನ್ಯ. ಈಗಲೂ ಆ ಬೀದಿಯಲ್ಲಿ ಅಂಗಡಿಹಾಕಿಕೊಂಡು ವ್ಯಾಪಾರ ಮಾಡುತ್ತಾರೆ.
ಹೋಗಲಿ ಗಾಂಧಿಬಜಾರ್ ನಲ್ಲಿ ಸುಗಮವಾಗಿ ಫುಟ್ ಪಾತ್ ನಲ್ಲಿ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ಆಗುತ್ತಿಲ್ಲ ಎಂಬ ದೂರು ಅನಾದಿಕಾಲದಿಂದಲೂ ಇದೆ. ಇವತ್ತಿಗೂ ಅದನ್ನ ಸರಿಪಡಿಸಲಾಗಲಿಲ್ಲ. ಹೋಗಲಿ ನಿನ್ನೆ ಬಸ್ ನವರು ಕರ್ಕಷ ಹಾರನ್ ಬಳಕೆಯ ವಿರುದ್ಧ ದಂಡದ ಜಾಗೃತಿ ಮೂಡಿಸಲಾಯಿತು. ಪರಿಣಾಮ ಶೂನ್ಯವೆಂಬಂತಾಗಿದೆ. ಹೋಗಲಿ ಸಂಜೆಯ ಮೇಲೆ ಕೆಲರಸ್ತೆಯಲ್ಲಿ ಈಗಲೂ ವಾಹನ ಸಂಚಾರಕ್ಕೆ ಅನುವಿಲ್ಲ. ಕೆಲ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿಯ ಗುಂಡಿಗಳಿಂದ ವಾಹನ ಸಂಚಾರ ಅಡ್ಡಿಇದೆ. ಸಮಸ್ಯೆಗಳು ನೂರೆಂಟಿವೆ.
ಇದನ್ನೆಲ್ಲಾ ಬಿಟ್ಟು ಪದೇ ಪದೇ ದಂಡ ವಸೂಲಿಗೆ ಇಳಿಯುವ ಇಲಾಖೆ ವಾರಕ್ಕೊಮ್ಮೆ ಎಂಬಂತೆ ದಂಡ ಇಟ್ಟುಕೊಂಡೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ. ಒಮ್ಮೆ ಹೋಗಿ ತೆರವು ಕಾರ್ಯಾಚರಣೆಯಲ್ಲಿ ನಿಂತು ಫೊಟೊ ತೆಗೆಸಿಕೊಂಡು ಬಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಟ್ ಮಾಡಿಬಿಟ್ಟರೆ ಆಯಿತು ಎಂಬ ಲೆಕ್ಕಾಚಾರದಲ್ಲಿರುವ ಇಲಾಖೆ ದಂಡ ವಸೂಲಿಗೆ ಸೈನಿಕರಂತೆ ರಸ್ತೆಗಳಲ್ಲಿ ಕಂಗೊಳಿಸುತ್ತಿದ್ದಾರೆ.
ನ್ಯಾಯಾಲಯವೂ ಈ ಬಗ್ಗೆ ಪ್ರಶ್ನೆ ಕೇಳಬೇಕಿದೆ. ಇಷ್ಟೆಲ್ಲಾ ದಂಡ ವಸೂಲಿ ಮಾಡುವ ಇಲಾಖೆಯಿಂದ ಅಪಘಾತಗಳು ಯಾಕೆ ಕಡಿಮೆಯಾಗುತ್ತಿಲ್ಲವೆಂದು. ಆಗ ಇಲಾಖೆಯ ಹಣೆಬರಹಗಳು ಬಟಾಬಯಲಾಗುತ್ತದೆ.