Girl in a jacket

ಸರ್ಕಾರವನ್ನ ನಾವು ಬೀಳಿಸೊಲ್ಲ ಅದಾಗೆ ಬೀಳುತ್ತೆ,ಅವರ ಸರಕಾರ ಬಿದ್ದ ನಂತರ ನಮ್ಮದೇ ಸರಕಾರ- ಡಿ.ಎಸ್.ಅರುಣ್



ಸುದ್ದಿಲೈವ್/ಶಿವಮೊಗ್ಗ

ರಾಜ್ಯದಲ್ಲಿ ಮೂರು ಕಡೆ ಉಪ ಚುನಾವಣೆ ನಡೆದಿದೆ. ಮೂರು ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಎನ್ ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಎಂಎಲ್ ಸಿ ಡಿ.ಎಸ್.ಅರುಣ್ ವಿಶ್ವಾಸ ವ್ಯಕ್ತಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಮಾಡ್ತಿರುವ ದ್ವೇಷದ ರಾಜಕಾರಣದಿಂದ ಕೋವಿಡ್ ಪ್ರಕರಣವನ್ನ ಎಸ್ ಐಟಿಗೆ ಕೊಟ್ಟಿದ್ದಾರೆ. ಕೋವಿಡ್ ಮಹಾಮಾರಿ ಪ್ರಪಂಚಕ್ಕೆ ಹೊಸ ಕಾಯಿಲೆಯಾಗಿತ್ತು ಎಂದರು. 

ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತೆಗೆದುಕೊಂಡ ನಿರ್ಧಾರಗಳು, ಅವರ ನಿರ್ಧಾರದಿಂದ ನಾವುಗಳು ನೆಮ್ಮದಿಯಾಗಿದ್ದೇವೆ. ಕುನ್ಹಾ ವರದಿ ಕೊಟ್ಟಿದ್ದಾರೆ. ವರದಿ ಕೊಟ್ಟ 15 ದಿನದೊಳಗೆ ಎಸ್ ಐಟಿ ಕೊಡ್ತಾರೆ. ಅರ್ಕಾವತಿ ರೀಡೂ, ಕೆಂಪಣ್ಣ ಆಯೋಗ ವರದಿ ಕೊಟ್ಟಿದೆ. ಆ ಬಗ್ಗೆ ಯಾವುದೇ ತನಿಖೆ ಇಲ್ಲ ಯಾಕೆ ಎಂದು ಪ್ರಶ್ನಿಸಿದರು. 

4 ವರ್ಷ 6 ತಿಂಗಳ ನಂತರ ಕಾಂಗ್ರೆಸ್ ನವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಕಾಂಗ್ರೆಸ್ ನವರು ಎಲ್ಲರಿಗೂ ಅಸಹ್ಯ ಬರುವ ರೀತಿ ರಾಜಕಾರಣ ಮಾಡ್ತಿದ್ದಾರೆ. ಕಾಂಗ್ರೆಸ್ ನವರು ಚುನಾವಣೆ ವೇಳೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಪ್ರಣಾಳಿಕೆಯಲ್ಲಿ ಇರುವುದನ್ನು ಯಾವುದನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. 

ಸರ್ವ ಜನಾಂಗದ ಶಾಂತಿಯ ತೋಟ ಅಂತಾರೆ. ಸರ್ವ ಜನಾಂಗದ ಶಾಂತಿಯ ತೋಟ ಎಲ್ಲಿದೆ?ಎಲ್ಲರ ನೆಮ್ಮದಿ ಭಂಗ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಇರೋದು ಒಂದು ಪರ್ಸೆಂಟ್ ಏನು ಮಾಡಿಲ್ಲ ಎಂದ ಅವರು ಕಾಂಗ್ರೆಸ್ ಸರಕಾರದದ ಅವಧಿಯಲ್ಲಿ ಒಬ್ಬ ಶಾಸಕ ಒಂದೇ ಒಂದು ಗುದ್ದಲಿ ಪೂಜೆ ಮಾಡಿಲ್ಲ ಎಂದರು. 

ಒಂದೇ ಒಂದು‌ ಕಾಮಗಾರಿಯ ವರ್ಕ್ ಆರ್ಡರ್ ಕೊಟ್ಟಿಲ್ಲ. ಪೊಲೀಸರಿಗೆ ವಿಶೇಷ ಭತ್ಯೆ ಕೊಟ್ಟಿಲ್ಲ. ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದರು. ಎಪಿಎಂಸಿ ಕಾಯ್ದೆ ತೆಗೆದರು, ದ್ರಾಕ್ಷಿ ಬೆಳೆಗಾರರಿಗೆ 200 ಕೋಟಿ ಕೊಡ್ತೀವಿ ಅಂದ್ರು‌ ಒಂದು ರೂಪಾಯಿ ಕೊಟ್ಟಿಲ್ಲ. ಹಾಲಿಗೆ ಪ್ರೋತ್ಸಾಹ ಧನ ಕೊಡ್ತೀವಿ ಅಂದ್ರು‌ ಕೊಟ್ಟಿಲ್ಲ. ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಗಳನ್ನು ಕೊಡಲು ಆಗಿಲ್ಲ. ನೀರಾವರಿ ಯೋಜನೆಗೆ ಹಣ ಕೊಡಲು ಆಗಿಲ್ಲ ಎಂದು ದೂರಿದರು. 

ಒಂದೇ ಒಂದು‌ ಕೈಗಾರಿಕಾ ವಲಯ ಆರಂಭ ಮಾಡಿಲ್ಲ. ಪ್ರವಾಸೋದ್ಯಮಕ್ಕೆ 5 ಸಾವಿರ ಕೋಟಿ ಕೊಡ್ತೀವಿ ಅಂದ್ರು‌ ಒಂದು ರೂಪಾಯಿ‌ ಕೊಟ್ಟಿಲ್ಲ. ವಾಲ್ಮೀಕಿ ಹಗರಣ, ಮುಡಾ ಹಗರಣ, ಭ್ರಷ್ಟಾಚಾರ, ದ್ವೇಷ ರಾಜಕಾರಣ ಕಾಂಗ್ರೆಸ್ ಬದ್ದತೆಯನ್ನ ಎತ್ತಿ ತೋರುತ್ತದೆ ಎಂದರು. 

ವಕ್ಪ್ ಹಗರಣ, ಹಿಂದು ವಿರೋಧಿ ಕಾಂಗ್ರೆಸ್ ಬದ್ದತೆಯಾಗಿದೆ. ಅವರು ಪ್ರಣಾಳಿಕೆಯಲ್ಲಿ ಹೇಳಿರುವಂತೆ ಒಂದೇ ಒಂದು ಸಾಧನೆ ಮಾಡಿಲ್ಲ. ಎಲ್ಲರಿಗೂ ಗೂಟ ಇಟ್ಟು‌ ಸರ್ವ ಜನಾಂಗದ ಶಾಂತಿಯ ತೋಟ ಅಂತಾರೆ. ಉಪ ಚುನಾವಣೆಗೆ ಒಂದೊಂದು ಕ್ಷೇತ್ರದಲ್ಲಿ ಹತ್ತು‌ ಹತ್ತು ಸಚಿವರು ಮೊಕ್ಕಾಂ ಹೂಡಿದ್ದರು. ಬರಗಾಲ ಎದುರಾದಾಗ, ನೆರೆ ಹಾವಳಿ ಬಂದಾಗ ಒಬ್ಬನೇ ಒಬ್ಬ ಸಚಿವ ಬರಲಿಲ್ಲ. ಸಮಸ್ಯೆ ಬಂದಾಗ ಒಬ್ಬ ಸಚಿವರು ಬರಲಿಲ್ಲ ಎಂದು ದೂರಿದರು. 

ಮಹಾರಾಷ್ಟ್ರ ಚುನಾವಣೆಗೆ ರಾಜ್ಯದಿಂದ 700 ಕೋಟಿ ಹೋಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಬಕಾರಿ ಇಲಾಖೆಯಿಂದ ಹಣ ಸಂಗ್ರಹ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. 

ಅಬಕಾರಿ ಗುತ್ತಿಗೆದಾರರು ಇದೇ 20 ರಂದು ಪ್ರತಿಭಟನೆ ಮಾಡ್ತಿದ್ದಾರೆ. ಸರಕಾರ ಅದಾಗಿಯೇ ಬೀಳುತ್ತದೆ.ಅವರಾಗಿಯೇ ಬೀಳಬೇಕಾದರೆ ನಾವು ಏಕೆ ಬೀಳಿಸಲು ಹೋಗೋಣ. ಅವರ ಸರಕಾರ ಬಿದ್ದ ನಂತರ ನಮ್ಮದೇ ಸರಕಾರ ಬರೋದು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close