Girl in a jacket

ಬಿಸಿಎಂ ಹಾಸ್ಟೆಲ್ ನ ವಿದ್ಯಾರ್ಥಿಗಳ ಮನವಿ ಏನು ಗೊತ್ತಾ?

 


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ವಾಜಪೇಯಿ ಲೇಔಟ್ ನಲ್ಲಿರುವ ಬಿಸಿಎಂ ಹಾಸ್ಟೆಲ್ ಗೆ ಹೆಚ್ಚುವರಿ KSRTC ನಗರ ಸಂಚಾರ ಬಸ್ ಬಿಡುವಂತೆ ಆಗ್ರಹಿಸಿ ಇಂದು KSRTC ಬಸ್ ನಿಲ್ದಾಣ ಮೇಲ್ವಿಚಾರಕರಿಗೆ ಮನವಿ ಸಲ್ಲಿಸಿದರು.

ವಾಜಪೇಯಿ ಲೇಐಟ್ ನಲ್ಲಿ ಬಿಸಿಎಂ, ಎಸ್ ಎಸ್ ಟಿ ಹಾಸ್ಟೆಲ್ ಸೇರಿ ಐದು ಹಾಸ್ಟೆಲ್ ಗಳಿದ್ದು, 800 ಜನ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಾರೆ.  

ಬೆಳಿಗ್ಗೆ 8-20, 8-30 ಮತ್ತು 8-40 ಕ್ಕೆ ಬಸ್ ಗಳು ಬರಬೇಕು ಆದರೆ ಬಸ್ ಗಳು 9 ಗಂಟೆಯ ನಂತರ ಬರುವುದರಿಂದ ಬಸ್ ಗಳು ರಶ್ ಆಗುತ್ತಿವೆ. ಬಸ್ ನಲ್ಲಿ ಪ್ರಯಾಣಿಸಲು ಸಾಧ್ಯವಾಗದೆ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಕೆಲ ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ 1.5 ಕಿಮಿ ದೂರ ಚಲಿಸಿ ಮಲ್ಲಿಗೇನ ಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ಹಿಡಿದು ಬಸ್ ನಿಲ್ದಾಣಕ್ಕೆ ಬಂದು ನಂತರ ಕಾಲೇಜಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅದುದರಿಂದ 10 ಗಂಟೆಯ ನಂತರವೂ  ಕ್ಕೆ ಬಸ್ ಬಿಡಬೇಕು. ಮತ್ತು 10 ಗಂಟೆಯನಂತರವೂ ಬಸ್ ಗಳನ್ನ ಬಿಡಬೇಕು.

ಮಧ್ಯಾಹ್ನದೂಟದ ವೇಳೆಗೂ ಬಸ್ ಬರುವಂತೆ ಆದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸಂಜೆಯ ನಂತರದಲ್ಲೂ ಹೆಚ್ಚುವರಿ ಬಸ್ ಗಳನ್ನ ಬಿಡುವುದರಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನುಕೂವಲಾಗಲಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close