ಸುದ್ದಿಲೈವ್/ಶಿವಮೊಗ್ಗ
ಜಿಲ್ಲಾ ಕುರುಬ ಸಂಘದ ವತಿಯಿಂದ 12 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕನಕದಾಸ ಸಮುದಾಯ ಭವನದ ಭೂಮಿ ಪೂಜೆಯನ್ನ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ನೆರವೇರಿಸಿದರು.
ನಂತರ ಮಾತನಾಡಿದ ಸಚಿವ ಭೈರತಿ ಸುರೇಶ್, ಒಂದು ವರ್ಷದ ಹಿಂದೆ ಶಿವಮೊಗ್ಗಕ್ಕೆ ಬಂದಾಗ ಈ ಜಾಗಕ್ಕೆ ಬಂದಿದ್ದೆ. ಸಮುದಾಯ ಭವನ ಆಗಬೇಕು ಎಂದು ಮಧುವರಿಗೆ ಸಹಕಾರ ನೀಡುವಂತೆ ಕೋರಿದ್ದೆ. ಸಿಎಂ ಆಶೀರ್ವಾದದಿಂದ ಭೂಮಿ ಪೂಜೆ ಮಾಡಲಾಗಿದೆ ಎಂದರು.
12 ಕೋಟಿ ಬೇಡಿಕೆಯನ್ನ ಜಿಲ್ಲಾ ಕುರುಬ ಸಂಘ ಕೇಳಿದೆ ಆದರೆ 7 ಕೋಟಿಯನ್ನ ಸರ್ಕಾರ ಕೊಡುತ್ತದೆ. ಉಳಿದ ಹಣದಲ್ಲಿ ಮೂರುವರೆ ಕೋಟಿ ಕೊಡಿಸುವ ಜವಬ್ದಾರಿ ನನ್ನದು. ಎಲ್ಲಾ ಸಮುದಾಯದವರಿಗೆ ಹಣಕೊಡಬೇಕು ವಿದ್ಯಾಸಂಸ್ಥೆಗೆ ಕೊಡುವುದರಿಂದ ಕೇಳಿದಷ್ಟು ಹಣ ಕೊಡಬೇಕು ಎಂದರು.
ತೋಡತೋಡ ದೇವೋ ಮೇಡಂ
ಉಳಿದ ಹಣಕ್ಕೆ ಭೈರತಿ ಸುರೇಶ್ ವೇದಿಕೆ ಮೇಲೆ ಹಣ ಘೋಷಿಸಿದ ಶಾಸಕರಿಗೆ ಒತ್ತಾಯಿಸಿದ್ದು ವಿಭಿನ್ನವಾಗಿತ್ತು. ಅವರನ್ನ ವೇದಿಜೆ ಮೇಲೆ ಮಾತನಾಡಿಸಿ 8-9 ಕೋಟಿ ಕೂಡಿಹಾಕಿದ್ದು ಸಹ ವಿಶೇಷವಾಗಿತ್ತು ಮೊದಲು ಸಂಸದ ರಾಘವೇಂದ್ರ 50 ಲಕ್ಷ ಕೊಡ್ತೀನಿ ಎಂದು ಘೋಷಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಅವರ ಸಂಬಂಧ ಚೆನ್ನಾಗಿದೆ. ಅನುದಾನವನ್ನ ಪ್ರಸನ್ನಕುಮಾರ್ ಸಂಸದರ ಮನೆಗೆ ಹೋಗಿ ಹೆಚ್ಚಿಸಿಕೊಳ್ಳಲಿ ಎಂದರು.
ಅದರಂತೆ ಎಂಎಲ್ ಎ ಅನುದಾನದಲ್ಲಿ 25 ಲಕ್ಷ ಘೋಷಿಸಿದ್ದ ಚೆನ್ನಬಸಪ್ಪರಿಗೆ 25 ರಿಂದ 50 ಲಕ್ಷ ರೂ.ಗೆ ಹೆಚ್ಚಿಸಿ ಹಣದ ಅನುದಾನ ಕೊಡುವಂತೆ ಕಮಿಟ್ ಮಾಡಿಸಿದರು. ಎಂಎಲ್ ಸಿ ಬಲ್ಕಿಸ್ ಭಾನು ಅವರಿಗೆ ತೋಡಾ ತೋಡಾ ದೇವೋ ಮೇಡಂ. ಈ ಸಮುದಾಯ ಭವನ ಎಲ್ಲರಿಗೂ ಬಳಕೆ ಆಗಲಿದೆ ಎಂದರು. ಅದರಂತೆ ಎಂಎಲ್ ಸಿ ಅರುಣ್ ಮತ್ತು ಡಾ.ಧನಂಜಯ ಸರ್ಜಿ ಕೊಡ್ತಾರೆ ಅವರಿಂದ 8-9 ಕೋಟಿ ಸಂಗ್ರಹವಾಗುತ್ತೆ. ಹೀಗೆ ಸಚಿವರು ಎಂಎಲ್ ಎ ಗೋಪಾಲ್ ಕೃಷ್ಣ ಬೇಳೂರು ಅವರಿಗೆ ಒತ್ತಾಯಿಸದೆ ಇರುವುದು ವಿಶೇಷವಾಗಿದೆ.
ಪಾಲಿಕೆ ಸಿಬ್ಬಂದಿ ಗಳ ನೇಮಕವಾಗಿದೆ. ಶಾಸಕ ಚೆನ್ನಬಸಪ್ಪಬವರು ಅಸೆಂಬ್ಲಿಯಲ್ಲಿ ಯಾವಾಗಲೂ ಕೇಳುತ್ತಿದ್ದರು. ಅದನ್ನ ಈಡೇರಿಸಲಾಗಿದೆ. 10 ಪಾಲಿಕೆಗಳ ಅನುದಾನಕ್ಕೆ ಎರಡು ಸಾವಿರ ಕೊಟಿ ಹಣ ನೀಡಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶಿವಮೊಗ್ಗ ಪಾಲಿಕೆಗೆ 200 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಶೀಘ್ರವಾಗಿ ಬಿಡುಗಡೆಯಾಗಲಿದೆ. ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಕೊರತೆ ಇಲ್ಲ ಎಂದರು.
ಪಾಲಿಕೆ ಚುನಾವಣೆ ಯಾವಾಹ?
ವೇದಿಕೆ ಮೇಲೆ ಭಾಷಣ ಮಾಡಿದ ಸಚಿವ ಭೈರತಿಗೆ ಪಾಲಿಕೆ ಚುನಾವಣೆ ಯಾವಾಗ ಎಂಬುದು ಸಭೀಕರು ಕೇಳಿದರು. ಚುನಾವಣೆ ನಡೆಸುವ ಬಗ್ಗೆ ಸ್ಪಷ್ಟನೆ ನೀಡದ ಸಚಿವರು ಸಮುದಾಯ ಭವನದ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ಬಂದಿರುವೆ ಏನೇ ಅಭಿವೃದ್ಧಿಗೆ ಕೊರತೆಗೆ ಸಮಸ್ಯೆ ಇಲ್ಲ ಎಂದರು.
ಈಶ್ವರಪ್ಪ ಸಾಹೇಬರಿಗೆ ಹೇಳಿಲ್ವಾ?
ಭಾಷಣದ ಮಧ್ಯೆ ಸಚಿವ ಭೈರತಿ ಸುರೇಶ್ ಮಾಜಿ ಡಿಸಿಎಂ ಈಶ್ವರಪ್ಪ ಅವರನ್ನ ನೆನಪಿಸಿಕೊಂಡು ಈಶ್ವರ್ಪನವರು ಕಾಣ್ತಿಲ್ಲ? ಎಂದು ಪ್ರಶ್ನಿಸಿದರು. ಇದಕ್ಕೆ ಕಾರ್ಯಕ್ರಮದ ಆಯೋಜಕರು ಮಾತನಾಡಿ, ಕರೆದಿದ್ದೀವಿ ಇತರೆ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಬಂದಿಲ್ಲವೆಂದರು.
ಸಂಸದ ರಾಘವೇಂದ್ರ ಮಾತನಾಡಿ, ಸರ್ಕಾರ ಮತ್ತು ಪಕ್ಷ ಯಾವುದೇ ಇರಲಿ ಬಿಎಸ್ ವೈ ಸಿಎಂ ಆಗಿದ್ದಾಗ ಜಿಲ್ಲಾ ಕುರುಬ ಸಂಘ ಬಂದು ಅನುದಾನ ಕೇಳಿತ್ತು. ಅದಕ್ಕೆ ಬಿಎಸ್ ವೈ ನೀಡಿದ್ದರು. ಕನಕ ಜಯಂತಿಗೆ ರಜೆ ಘೋಷಿಸಿದ್ದು ಬಿಎಸ್ ವೈ ಎಂದರು.
ಭೈರತಿ ಸುರೇಶ್ ಲಕ್ಷ್ಮೀಪುತ್ರರಾಗಿದ್ದಾರೆ. ಸುರೇಶ್ ಕೈಯಲ್ಲಿ ಸರ್ಕಾರದ ಕೆಲಸ ಆಗಲಿದೆ. ಉಳಿದ ಅನುದಾನಕ್ಕೆ ಎಲ್ಲರೂ ಕೈಜೋಡಿಸಿ. ನನಗೆ ಅನುದಾನ ವರ್ಷಕ್ಕೆ 5 ಕೋಟಿ ಬರುತ್ತದೆ. ನನ್ನ ಕಡೆಯಿಂದ 50 ಲಕ್ಷ ರೂ. ಅನುದಾನ ಕೊಡುವುದಾಗಿ ಸಂಸದರು ಘೋಷಿಸಿದರು.
ಮೊದಲಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಸಾರ್ವಜನಿಕ ಸೇವೆಗೆ ಸಿಎಂ ಮತ್ತು ಭೈರತಿ ಸುರೇಶ್ ಮಾಡಲಿದ್ದಾರೆ. ಅರ್ಧ ತಂದಿದ್ದೀರಿ ಇನ್ನು ಅರ್ಧ ಯಾವಾಗ ಕೊಡ್ತೀರಾ? ಎಂಬುದನ್ನ ಘೋಷಿಸಿ ಎಂದು ಮನವಿ ಮಾಡಿಕೊಂಡರು. ಸರ್ಕಾರದ ವತಿಯಿಂದ ಏನು ಕೆಲಸ ಆಗಲಿದೆ ಎಂದರು.
ಶಾಸಕ ಚೆನ್ನಬಸಪ್ಪ ಮಾತನಾಡಿ ಎಂಎಲ್ ಎ ಅನುದಾನದಲ್ಲಿ 25 ಲಕ್ಷ ರೂ. ಘೋಷಿಸಿದ್ದರು.