ಸುದ್ದಿಲೈವ್/ಶಿವಮೊಗ್ಗ
ಜೈನ ಸಮುದಾಯಕ್ಕೆ ಪ್ರತ್ಯೇಕ ಆಯೋಗ ಮತ್ತು ಅಭಿವೃದ್ಧಿ ನಿಗಮ ನೀಡುವಂತೆ ಸೊರಬ ಮೋಕ್ಷ ಮಂದಿರ ಸಂಸ್ಥಾನ ಜೈನಮಠದದ ಸ್ವಾಮೀಜಿಗಳಾದ ವೃಷ್ಭಸೇನೆ ಭಟ್ಟಾರಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆಗೆ ಹಾನಿಯಾಗಿದ್ದ ಸೊರಬ ಲಕ್ಕವಳ್ಳಿ ಜೈನಮಠಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡಲಾಗುತ್ತಿದೆ. ಮುಸ್ಲೀಮೇತರ ಅಲ್ಪಸಂಖ್ಯಾತರದಲ್ಲಿ ನೀಡುವ ಅನುದಾನದಲ್ಲೇ ತಾರತಮ್ಯವಿದೆ ಆದರೆ ಇದನ್ನ ಸಮಾಧಾನವಾಗಿ ಬಗೆಹರಿಸಿಕೊಳ್ಳಬೇಕೆಂದರು.
2019 ಮತ್ತು 2021 ರಲ್ಲಿ ವರದಾ ನದಿಯಲ್ಲಿ ಬಸದಿ ಶಾಲೆ, ವಸತಿ ನಿಲಯ ಮುಳುಗಿ ಹೋಗಿತ್ತು. ಇದಕ್ಕೆ ಅನುದಾನ ನೀಡಲು ಒಪ್ಪುತ್ತಿಲ್ಲ. ಅದಕ್ಕೆ ಅನುದಾನ ಶಾಂತಿಗಳ ರೀತಿಯಲ್ಲಿ ನಡೆಯಬೇಕು ಎಂದರು.
ಆಯೋಗ ಮತ್ತು ಅಭಿವೃದ್ಧಿ ನಿಗಮ ರಚನೆ, ಮೀಸಲಾತಿ 1 ಬಿ ಮತ್ತು ಸೆಕೆಂಡ್ ಬಿ ಕೊಡಬೇಕೆಂದು ಕೆಲ ಜೈನ ಮುನಿಗಳು ಪ್ರತಿಭಟಿಸುತ್ತಿದ್ದಾರೆ. ಜೈನರಲ್ಲಿ ಪ್ರತಿಭಟೆ, ಹಿಂಸೆಗಳಿಲ್ಲ. ಆದರೆ ಶಾಂತಿ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.