ಸುದ್ದಿಲೈವ್/ಶಿವಮೊಗ್ಗ
ಇಂಟರ್ ನ್ಯಾಷನಲ್ ಲಿಂಗಾಯತ ಯೂತ್ ಫಾರಂ(ILYF) ಹಾಗೂ ವೀರಶೈವ ಯುವ ಸಂಗಮ ಮತ್ತು ಬಸವಕೇಂದ್ರದಿಂದ ಸಿರಿಧಾನ್ಯ ಆಹಾರ ಸ್ಪರ್ಧೆಗಾಗಿ ಮಹಾ ಸಂಗಮ ಸಿರಿ ಬುತ್ತಿ ಹಮ್ಮಿಕೊಂಡಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಐಎಲ್ವೈಎಫ್ ಸಂಸ್ಥೆಯ ಮಹದೇವ ಪ್ರಸಾದ್, 2013 ರಲ್ಲಿ ಮೈಸೂರಿನಲ್ಲಿ ಆಲಲರಂಭಗೊಂಡ ILYF ಸಂಸ್ಥೆ ಉದ್ಯೋಗವನ್ನ ಅಭಿವೃದ್ಧಿ ಪಡಿಸಲು ಮತ್ತು ಕೇಂದ್ರ ಸರ್ಕಾರದ ಉದ್ದೇಶ ತಲುಪಿಸಲು ILYF ಸಿರಿಧಾನ್ಯವನ್ನ ಹಮ್ಮಿಕೊಂಡಿತು. ಈಗ ಶಿವಮೊಗ್ಗದಲ್ಲಿ ಚಾಪ್ಟರ್ ಆರಂಭಿಸುವ ಸಲುವಾಗಿ ಸ್ಪರ್ಧೆ ಮೂಲಕ ಆರಂಭಿಸುತ್ತಿದೆ.
ಐಬಾಂಡ್, ಐಎಎಸ್ ಮತ್ತು ಕೆಎಎಸ್ ಸ್ಪರ್ಧೆಗೆ, ಆರೋಗ್ಯ ಶಿಬಿರಗಳನ್ನ ಯಾವುದೇ ಉದ್ದೇಶವಿಲ್ಲದೆ ಆರಂಭಿಸಲಾಗಿದೆ. ಇಂಡಿಯನ್ ಟ್ರಸ್ಟ್ ಆಕ್ಟ್ ನ ಅಡಿಯಲ್ಲಿ ಐ ಲೈಫ್ ಚಾರಿಟೇಬಲ್ ಟ್ರಸ್ಟ್ ನೋಂದಿತ ಟ್ರಸ್ಟ್ ಆಗಿದೆ ಎಂದು ಅವರು ತಿಳಿಸಿದರು
ನ.24 ರಂದು ಬಸವ ಕೇಂದ್ರದಲ್ಲಿ ಸಿರಿಧಾನ್ಯ ಅಡುಗೆ ಸ್ಪರ್ಧೆಯನ್ನ ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗುತ್ತಿದೆ. ಪುರುಷ, ಮಹಿಳೆ ಹಾಗೂ ಸಂಘ ಸಂಸ್ಥೆಗಳು ಭಾಗಿಯಾದರೆ ಪ್ರತ್ಯೇಕ ಬಹುಮಾನ ಇರುತ್ತದೆ. ನ.23 ರ ಒಳಗೆ ತಮ್ಮಹೆಸರು ನೋಂದಾಯಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ 948211881/948139228 ನಂಬರ್ ಗಳನ್ನ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.