ಸುದ್ದಿಲೈವ್/ಶಿವಮೊಗ್ಗ
ವಿಶ್ವದ ಅತಿ ದೊಡ್ಡ ಹಾಗೂ ಪ್ರಪ್ರಥಮ ಸರ್ವ ಮಹಿಳಾ ಸಂಸತ್ ನಡೆಸಲಾಗುತ್ತಿದೆ. ಜ.10, 11, 12 ರಂದು ನಡೆಯಲಿದೆ. ಒಳಾಂಗಣ ಕ್ರೀಡಾಂಗಣ ಅಥವಾ ಕಸ್ತೂರಬಾ ಕಾಲೇಜುಗಳಲ್ಲಿ ನಡೆಯುವ ಸಂಭವವಿದೆ ಎಂದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜೆಸಿಐ ಸೆನೆಟರ್ ಡಾ.ಎನ್.ವಿ.ಶಾಸ್ತ್ರಿಗಳು, ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಯವರು ಭಾಗಿಯಾಗುವ ನಿರೀಕ್ಷೆ ಇದೆ. ಕುಮಾರ ಸ್ವಾಮಿ, ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ ಎಂದರು.
54 ಜನ ಮಂತ್ರಿಗಳಾಗುತ್ತಿದ್ದಾರೆ. 4 ಬಿಲ್ ಮಂಡನೆಯಾಗಲಿದೆ. ಕಾಶ್ಮೀರದಿಂದ ಕನ್ಯಾಕುಮಾರ್ ವರೆಗೆ ಪ್ರತಿವರ್ಷ ಯುವ ಸಂಸತ್ ನಡೆಯಲಿದೆ. ಈ ಬಾರಿ ಮಹಿಳೆಯರು ಭಾಗಿಯಾಗಲಿದ್ದಾರೆ ಎಂದರು.
800 ಜನ ಜನಪ್ರತಿಗಳು ಕೂರುವ ವ್ಯವಸ್ಥೆ ಇದೆ. ಜೆಸಿಐ ಶಿವಮೊಗ್ಗ, ಶಾಶ್ವತಿ ಹಾಗೂ ಶಿವಮೊಗ್ಗದ ಎಲ್ಲಾ 12 ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಅರ್ಪಿಸಲಾಗುತ್ತಿದೆ. ನಗರದ ಮಹಿಳೆಯರು ಹೆಸರು ನೀಡಬಹುದು. ಎಂಪಿ ಆಗ ಬಯಸುವವರು 500 ರೂ. ಪ್ರವೇಶ ಶುಲ್ಕವಿದೆ.
ಯಾರೇ 11 ಜನರನ್ನ ಇವರು ಉಚಿತವಾಗಿ ಸೇರಿಸಬಹುದಾಗಿದೆ. ಎಂಪಿಗಳ ಮನೆಯವರಿಗೆ ಕುಟುಂಬದವರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 250 ರೂ. ನೀಡಿದರೆ ಇಬ್ಬರಿಗೆ ಅವಕಾಶ ಹಾಗೂ 1 ಊಟ ನೀಡಲಾಗವುದು. 1000 ರೂ. ನೀಡಿದರೆ ಇಬ್ಬರು 2 ದಿನ ಭಾಗವಹಿಸಬಹುದಾಗಿದೆ. ಈ ನಮಸಂಬಙಧ ಇನ್ನೂ 4 ಸುದ್ದಿಗೋಷ್ಠಿ ನಡೆಯಲಿದೆ ಎಂಬ ಆಶಾಭಾವನೆ ನುಡಿದರು.
ಆಸಕ್ತರು ಗೋಪಿ ಸರ್ಕಲ್ ನಲ್ಲಿರುವ ಶ್ರೀನಿಧಿ ಬಟ್ಟೆಯನ್ನ ಸಂಪರ್ಕಿಸಬಹುದು ಅಥಚಾ ಶಾಶ್ವತಿ ಘಟಕದ ಜೆಸಿಐ ಅಧ್ಯಕ್ಷ ಜೆಎಫ್ ಡಿ ನರಸಿಂಹಮೂರ್ತಿ ಮೊಬೈಲ್ ನಂಬರ್ 7349608851 ಅಥವಾ ಶಾಸ್ತ್ರಿಗಳನ್ನ 9886891841 ಸಂಪರ್ಕಿಸಬಹುದಾಗಿದೆ.