ಸುದ್ದಿಲೈವ್/ಶಿವಮೊಗ್ಗ
49 ಪರಿಶಿಷ್ಟಜಾತಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿಯು ಒಳ ಮೀಸಲಾತಿ ಜಾರಿಗೆ ತರಲು ಡಿ.18 ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಕೆ.ಚಾವಡೆಲೋಕೇಶ್, ಸದಾಶಿವ ಆಯೋಗ ಎಲ್ಲಾ ಜಾತಿಗೂ ಪ್ರಾಮುಖ್ಯತೆ ನೀಡಲಾಗಿದೆ. ಎಲ್ಲಾ ಜಾತಿಯ ಮುಖಂಡರನ್ನಕರೆಯಿಸಿ ಸಮಯ ಹಾಳಾಗದಂತೆ ಒಳಮೀಸಲಾತಿ ಜಾರಿಗೆ ತರಬೇಕು. ಮಾಧಿಸ್ವಾಮಿ ಆಯೋಗದಲ್ಲಿ 1% ಮೀಸಲಾತಿ ನೀಡಲಾಗಿದೆ. ಅದನ್ನ 3% ಗೆ ಹೆಚ್ಚಿಸಬೇಕಿದೆ ಎಂದು ತಿಳಿಸಿದರು.
25 ಲಕ್ಷ ಕೊರಮ-ಕೊರಚ ಜನಾಂಗದ ಅಭಿವೃದ್ಧಿ ಪಡಿಸಲು ಒಂದು ಪ್ರತ್ಯೇಕ ಸಂಸ್ಥೆಯನ್ನ ಸ್ಥಾಪಿಸಲಾಗುವುದು ಮತ್ತು ಇವರ ಕುಲಕಸುಬುಗಳಿಗೆ ಅಗತ್ಯವಾದ ಸಾಮಾಗ್ರಿಗಳನ್ನ ಸರಬರಾಜು ಮಾಡಬೇಕು. ಸಮುದಾಯ ಭವನಕ್ಕೆ 5 ಕೋಟಿ ನೀಡುವಂತೆ ಆಯವ್ಐದಲ್ಲಿ ತಿಳಿಸಲಾಗಿತ್ತು. ಅದನ್ನ ಜಾರಿಗೆ ತರುವಂತೆ ಒತ್ತಾಯಿಸಿದರು.
ವಕೀಲ ವೀರೇಶ್ ಮಾತನಾಡಿ, ನಮ್ಮ ಜನಾಂಗದಿಂದ ಯಾವ ಎಂಪಿ, ಶಾಸಕರು ಮತ್ತು ಯಾರೂ ಇಲ್ಲ. ಆದರೆ 300 ಕೋಟಿ ಹಣ ತೆಗೆದಿಡಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಯಾವುದೂ ಹಣ ಬಿಡುಗಡೆಯಾಗಿಲ್ಲ. ಅಲೆಮಾರಿಗಳ ಆಯೋಗ ರಚಿಸಬೇಕಿದೆ. ಹಂದಿ ಜೋಗಿ, ಗೋಸಂಗಿ, ಇರುವುದರಿಂದ ಜಾತಿ ಪ್ರಮಾಣ ಪತ್ರ ಸಮರ್ಪಕವಾಗಿ ಸಿಗುತ್ತಿಲ್ಲ. ಹಾಗಾಗಿ ಆಯೋಗ ರಚಿಸಬೇಕಿದೆ ಎಂದರು.
ವೇಷ ಭೂಷಣದೊಂದಿಗೆ ಬೆಳಗಾವಿ ಚಲೋ ಮಾಡಲಾಗುವುದು. ಡಿ.13 ರಂದು ಬೆಳಗಾವಿ ವಲೋ ಇತ್ತು. ಅದನ್ನ ಮುಂದು ಹಾಕಿ ಡಿ.18 ರಂದು ನಡೆಸಕಾಗಿದೆ ಎಂದರು.