ದೌರ್ಜನ್ಯ ಸಮಿತಿ ಆಯ್ಕೆಯ ಪುನರ್ ರಚನೆಗೆ ಹರಮಘಟ್ಟ ರಂಗಪ್ಪನವರ ತಂಡದ ಹೋರಾಟ |
ಸುದ್ದಿಲೈವ್/ಶಿವಮೊಗ್ಗ
ಅಟ್ರಾಸಿಟಿ ಸಮಿತಿ (ದೌರ್ಜನ್ಯ ಸಮಿತಿ) ಆಯ್ಕೆಯ ಪರ ಮತ್ತು ವಿರೋಧ ಬಗ್ಗೆ ಇಂದು ಡಿಸಿ ಕಚೇರಿಯ ಎದುರು ಹೋರಾಟ ನಡೆದಿದೆ. ದೌರ್ಜನ್ಯ ಸಮಿತಿ ಆಯ್ಕೆ ಅಕ್ರಮ ಎಂದು ದಲಿತ ಸಂಘರ್ಷ ಸಮಿತಿ ಡಿಸಿ ಕಚೇರಿಯ ಹೊಸ್ತಿಲಿನಲ್ಲಿ ಕುಳಿತು ಹೋರಾಡಿದರೆ, ಆಯ್ಕೆಯಾದ ಸಮಿತಿ ಸದಸ್ಯರು ಸಮಾಜ ಕಲ್ಯಾ ಇಲಾಖೆ ಉಪನಿರ್ದೇಶಕರ ಆಯ್ಕೆ ಸರಿಯಿದೆ. ಉದ್ದೇಶ ಪೂರಕವಾಗಿ ವಿರೋಧಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅಟ್ರಾಸಿಟಿ ಸಮಿತಿ ದೌರ್ಜನ್ಯ ಸಮಿತಿ ಆಯ್ಕೆಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶ ಪೂರಕವಾಗಿ ಸಮಿತಿಯಲ್ಲಿ ಸ್ಥಾನಕೇಳಿ ಸಿಗದೆ ಇದ್ದಾಗ ನಿರಾಶೆಗೊಂಡು ಪುನರ್ ರಚನೆಗೆ ಆಗ್ರಹಿಸಿದೆ. ಎಲ್ಲಾ ವರ್ಗದವರಿಗೂ ಸಮಾಜದವರಿಗೂ ಅವಕಾಶ ಕಲ್ಪಿಸಿ ಅಟ್ರಾಸಿಟಿ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿಗೆ ಆಯ್ಕೆಯಾಗಿರುವ ನೂತನ ಸದಸ್ಯ ಬೂದಿಗೆರೆ ಬಸವರಾಜ್ ಮತ್ತು ಅವರ ತಂಡ ಆಗ್ರಹಿಸಿದೆ.
ಈ ಕುರಿತು ಮಾತನಾಡಿದ ಸಮಿತಿಯ ಸದಸ್ಯ ಬೂದಿಗೆರೆ ಬಸವರಾಜ್, ಸಮಿತಿಗೆ ಆಯ್ಕೆಯಾದ ಸದಸ್ಯರ ನೇಮಕಾತಿ ಎಲ್ಲಾ ಸಮಾಜಕ್ಕೂ ನ್ಯಾಯ ನೀಡಿದಂತಿದೆ. ಈ ಸಮತಿಯ ಸಭೆಯನ್ನ ಡಿಸಿಯವರು ಆದಷ್ಟು ಬೇಗ ಕರೆಯಬೇಕು ಎಂದು ಹೇಳಿದರು.
ಆದರೆ ಡಿಎಸ್ ಎಸ್ ನ ಹಮಘಟ್ಟ ರಂಗಪ್ಪ ಮಾತನಾಡಿ, ದೌರ್ಜನ್ಯ ಸಮಿತಿಯ ಆಯ್ಕೆ ಸಾಮಾಜಿಕ ನ್ಯಾಯ ಒದಗಿಸುವುದಿ್ಲ. ಆಯ್ಕೆ ಮಾಡಿದ ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪನವರನ್ನ ವಜಾಗೊಳಿಸಬೇಕು. ಸಮಿತಿಯ ಪುನರ್ ಆಯ್ಕೆ ಮಾಡಬೇಕು ಎಂದರು.
ದೌರ್ಜನ್ಯ ಸಮಿತಿ ಆಯ್ಕೆ ಸರಿಯಾಗಿದೆ ಎಂದು ಬೂದಿಗೆರೆ ಬಸವರಾಜ್ ಮತ್ತು ತಂಡದವರ ಪ್ರತಿಭಟನೆ |