ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಐದುದಿನಗಳ ಕಾಲದವರೆಗಿನ 55ನೇ ವರ್ಷದ ದುರ್ಗಿಗುಡಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದೆ. ಕನ್ನಡ ತಾಯಿ ಭುವನೇಶ್ವರಿಯ ಪೋಟೊ ಹೊತ್ತ ರಥಯಾತ್ರೆ ನಗರದ ಪ್ರಮುಖ ದಾರಿಯಲ್ಲಿ ಸಾಗಿ ದುರ್ಗಿಗುಡಿ ತಲುಪಿದೆ.
ಬೆಳಿಗ್ಗೆ 10-30ಕ್ಕೆ ಭುವನೇಶ್ವರಿ ತಾಯಿಯ ಮೆರವಣಿಗೆಯು ಸಹ್ಯಾದ್ರಿ ರೋಡ್ ಬ್ರಾಸ್ ಬ್ಯಾಂಡ್ ಆರ್ಕೇಸ್ಟ್ರಾದೊಂದಿಗೆ ಗಾಂಧಿ ಬಜಾರ್, ಶಿವಪ್ಪ ನಾಯಕವೃತ್ತ, ನೆಹರೂ ರಸ್ತೆ, ಗೋಪಿವೃತ್ತದ ಮೂಲಕ ದುರ್ಗಿಗುಡಿ ತಲುಪಿದೆ. ರಾತ್ರಿ 8-30 ಕ್ಕೆ ಚಲನಚಿತ್ರ ಗೀತೆ, ಭಾವಗೀತೆ ಹಾಗೂ ಜಾನಪದಗೀತೆ ಗಾಯನ ಕಾರ್ಯಕ್ರಮ ಜರುಗಿದೆ.
ಮಂಗಳವಾರ ನಾಳೆ, ಸೈಯ್ಯದ್ ಅರ್ಪಿಸುವ ಮಲೆನಾಡು ಬ್ರದರ್ಸ್ ವಾದ್ಯಗೋಷ್ಠಿ ಅವರಿಂದ ಚಲನಚಿತ್ರಗೀತೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಡಿ.18 ರಂದು ಭದ್ರಾವತಿಯ ಪ್ರವೀಣ್ ಮತ್ತು ಅಂಬಿಕಾರವರ ತಂಡದವರಿಂದ ಚಲನಚಿತ್ರ ಗೋಷ್ಠಿ ನಡೆಯಲಿದೆ.
ಜ್ಯೂನಿಯರ್ ವಿಷ್ಣುವರ್ದನ್ ಅವರಿಂದ (ಅಪೇಕ್ಷ ಮಂಜುನಾಥ್) ಚಿತ್ರಗೀತೆಗಳಿಗೆ ನೃತ್ಯ. ಡಿ.20 ರಂದು ಜಿ ಟಿವಿ ಕಲರ್ಸ್ ಕನ್ನಡದ ಸರಿಗಮಪ, ಕನ್ನಡ ಕೋಗಿಲೆ, ಮಲೆನಾಡ ಕೋಗಿಲೆ, ಖ್ಯಾತ ಗಾಯಕರಿಂದ ಸಂಗೀತ ಜೆ ಕಾರ್ಯಕ್ರಮ ನಡೆಯಲಿದೆ. ರಾಜ್ಯೋತ್ಸವ ಸಮಿತಿಯ ಆಡಳಿ ಮಂಡಳಿ ಸರ್ವರಿಗೂ ಸ್ವಾಗತ ಕೋರಿದೆ.