ಸುದ್ದಿಲೈವ್/ಶಿವಮೊಗ್ಗ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗದ ಜೈಲಿನಲ್ಲಿರುವ ಎ.12 ಆರೋಪಿ ಲಕ್ಷ್ಮಣ್ ಜಾಮೀನಿನ ಮೇಲೆ ಬಿಡುಗಡೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ12 ಆಗಿದ್ದ ಲಕ್ಷ್ಮಣ್ ಮತ್ತು ಎ06 ಜಗದೀಶ್ ಆಗಸ್ಟ್ 28 ರಲ್ಲಿ ಶಿವಮೊಗ್ಗದ ಓತಿಘಟ್ಟದಲ್ಲಿರುವ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದರು. ರೌಡಿಶೀಟರ್ ನಾಗ ನ ಜೊತೆ ಆರೋಪಿ ನಟ ದರ್ಶನ್ ಕಾಣಿಸಿಕೊಂಡ ಪ್ರಕರಣದಲ್ಲಿ ಡಿಗ್ಯಾಂಗ್ ನ 17 ಜನರನ್ನ ರಾಜ್ಯದ ಹಲವು ಜೈಲ್ ಗಳಿಗೆ ಶಿಫ್ಟ್ ಮಾಡಲಾಗಿತ್ತು
ನಟ ದರ್ಶನ್ ಅವರನ್ನ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ಎ.12 ಲಕ್ಷ್ಮಣ್ ಮತ್ತು ಎ06 ಜಗದೀಶ್ ರನ್ನ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಂದು ಲಕ್ಷ್ಮಣ್ ಗೆ ಜಾಮೀನು ದೊರೆತಿದೆ. ಜಾಮೀನು ದೊರೆತ ಹಿನ್ನಲೆಯಲ್ಲಿ ಲಕ್ಷ್ಮಣ್ ಜಾಮೀನಿನ ಮೇಲೆ ಬಿಡುಗಡೆ ಆಗಿದೆ.
ದರ್ಶನ್ ಅಭಿಮಾನಿ ಸಂಘದ ಚಿತ್ರದುರ್ಗದ ಜಗದೀಶ್ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆದುಕೊಂಡ ಆರೋಪದಲ್ಲಿ ಅಂದರ್ ಆಗಿದ್ದ. ಈತನಿಗೆ ಜಾಮೀನು ಸಿಕ್ಕದ್ದರೂ ಶೂರಿಟಿ ಸಮಸ್ಯೆಯಿಂದ ಬಿಡುಗಡೆಯಾಗಿಲ್ಲ. ಲಕ್ಷ್ಮಣ್ ರಿಗೆ ರಾಜಕುಮಾರ್ ಅವರು ಶೂರಿಟಿ ನೀಡಿರುವ ಮಾಹಿತಿ ಲಭ್ಯವಾಗಿದೆ.
ಲಕ್ಷ್ಮಣ್ ಅವರಿಗೆ ಶುಕ್ರವಾರ ಜಾಮೀನು ದೊರೆತಿತ್ತು. ಆದರ ನಿನ್ನೆ ರಾತ್ರಿಯ ವೇಳೆಗೆ ಜಾಮೀನು ಪ್ರೋಸೆಸ್ ಸಂಪೂರ್ಣಗೊಂಡು ಇಂದು ಬಿಡುಗಡೆ ಆಗಿದೆ.