ಸಂಧರ್ಭಿಕ ಚಿತ್ರ |
ಸುದ್ದಿಲೈವ್/ಶಿವಮೊಗ್ಗ
ಸಾಮಾಜಿಕ ಜಾಲತಾಣವೆಂಬುದು ಇಂದು ಕೇವಲ ನಗರಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಸಾಧನವಾಗಿ ಉಳಿದಿಲ್ಲ. ಕಾಡಾನೆಯ ದಾಳಿಗೆ ನಲುಗಿರುವ ತಾಲೂಕಿನ ಜನ ಎಚ್ಚರದಿಂದ ಓಡಾಡಲು ವಾಟ್ಸಪ್ ಸ್ಟೇಟಸ್ ನ್ನ ಬಳಸಿಕೊಂಡು ರೈತರುಗಳು ತಮಗೆ ಸಿಕ್ಕ ಫ್ಲಾಟ್ ಫಾರಂಗಳಲ್ಲಿ ಎಚ್ಚರವಹುಸುವ ಸಂದೇಶ ಕಳುಹಿಸಿದ್ದಾರೆ.
ಮಲೆನಾಡಿನ ಭಾಗಗಳಲ್ಲಿ ಅರ್ಧಕ್ಕರ್ಧ ನೆಟ್ ವರ್ಕ್ ಗಳೇ ಇರೊದಿಲ್ಲ. ಆದರೆ ಶಿವಮೊಗ್ಗ ತಾಲೂಕಿನ ಹಳ್ಳಿಗಳಲ್ಲಿ ತಮಗೆ ಸಿಗುವ ಮಾಹಿತಿಗಳನ್ನ ಹಂಚಿಕೊಂಡು ಮತ್ತೋತರ್ವರನ್ನ ಜಾಗೃತಿಗೊಳಿಸುತ್ತಿರುವುದು ಎಂತಹವರನ್ನೂ ಹುಬ್ಬೇರಿಸುತ್ತದೆ.
ಪುರುದಾಳು, ಆಲದೂರು ಹೊಸಳ್ಳಿ, ಗುಡ್ಡದ ಅರಕೆರೆ, ಸಿರಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಇಂದು ದಿಡೀರ್ ಎಂದು ಶೆಟ್ಟಿಕೆರೆ, ಶಾಂತಿ ಕೊರಗಿ ಭಾಗದಲ್ಲಿ ಪ್ರತ್ಯಕ್ಷವಾಗಿದೆ.
ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಶೆಟ್ಟಿಕೆರೆ ಶಾಂತಿಕೆರೆ ಕೊರಗಿ ಭಾಗದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಕೆಲವಷ್ಟು ಬೆಳೆಗಳನ್ನು ನಾಶ ಮಾಡಿರುವುದರಿಂದ ಕಾಡಾನೆಗಳನ್ನ ಓಡಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ರೈತರು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗಳನ್ನು ಓಡಿಸುವುದಕ್ಕೆ ಸಿಡಿಮದ್ದು ಸಿಡಿಸುತ್ತಿದ್ದು, ಈ ಭಾಘಳಲ್ಲಿ ಸಾರ್ವಜನಿಜರು 3 ಕಾಡಾನೆಗಳು ಪ್ರತ್ಯಕ್ಷವಾಗಿದೆ. ಇಲ್ಲಿನ ಯುವಕರ ಮೊಬೈಲ್ ಸ್ಟೇಟಸ್ ಗಳಲ್ಲಿ ಕಾಡಾನೆಯ ಮಾಹಿತಿಗಳು ಹರಿದಾಡುತ್ತಿವೆ.
ಶೆಟ್ಟಿಕೆರೆ, ಶಾಂತಿಕೆರೆ ಹಾಗೂ ವಡ್ಡೇರಕೊಪ್ಪದ ಗ್ರಾಮಸ್ಥರಲ್ಲಿ ವಿನಂತಿ, ಸೂಡೂರು ಗೇಟು ಬಳಿ 3 ಆನೆಗಳು ಪ್ರತ್ಯಕ್ಷವಾಗಿದೆವೆಂದು ಅರಣ್ಯ ಅಧಿಕಾರಿಗಳೆ ತಿಳಿಸಿದ್ದು ಆದಷ್ಟು ಜಾಗೃತಿ ವಹಿಸುವಂತೆ ಮೂರು ಗ್ರಾಮಗಳ ಯುವಕರ ವಾಟ್ಸಪ್ ಸ್ಟೇಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.