ಡಾ.ಧನಂಜಯ ಸರ್ಜಿ |
ಸುದ್ದಿಲೈವ್/ಶಿವಮೊಗ್ಗ
ಬಳ್ಳಾರಿ ಬಾಣಾಂತಿಯರ ಸಾವು ಮುಂದುವರೆದಿದ್ದು, ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನ ಎಂಎಲ್ ಸಿ ಡಾ.ಧನಂಜಯ ಸರ್ಜಿ ಸ್ವಾಗತಿಸಿದ್ದಾರೆ.
ದೇಶದ ಆಧುನೀಕರಣ ಹೆಚ್ಚಳಕ್ಕೆ ಎರಡು ಅಳತೆಗೋಲಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಹೇಗಿದೆ ಎಂಬುದು ಒಂದು ಅಳತೆಗೋಲಾಗಿದೆ. ಅವರ ಸಾವು ಸಹ ಅಭಿವೃಧ್ಧಿಯ ಮತ್ತು ಡೌನ್ ಫಾಲ್ ನ ಅಳತೆಯಾಗಲಿದೆ. ಬಳ್ಳಾರಿಯ ಬಾಣಂತಿಯರ ಸಾವು ಸರ್ಕಾರದ ಕಾರ್ಯಪ್ರವೃತ್ಯಿಯನ್ನ ಪ್ರಶ್ನಿಸಿದೆ.
ರೋಗ ಉಲ್ಬಣವಾದಾಗ ರೋಗಿಗಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಈಗಿನ ಸೀಜನ್ ಮತ್ತು ಪೋಸ್ಟ್ ಕೋವಿಡ್ ನಿಂದ ಆಗುತ್ತಿರುವ ಸಾವು ನೋವುಗಳು ಹೆಚ್ಚಳವಾಗುತ್ತಿದೆ. ಇದು ಜೀವಕ್ಕೆ ಹಾನಿ ಉಂಟಾಗುತ್ತಿದೆ ಎಂದರು.
ಮೆಡಿಸಿನ್ ದುಷ್ಪರಿಣಾಮದಿಂದ ಆಗಿದೆ ಎಂದರೆ ಏಕಕಾಲದಲ್ಲಿ ಸಾವು ಆಗಬೇಕು. ಏಕಕಾಲದಲ್ಲಿ ಒಂದೇ ಆಸ್ಪತ್ರೆಯಲ್ಲಿ ಸಾವಾಗಿಲ್ಲ. ಬೇರೆಬೇರೆ ಕಡೆ ಆಗಿದೆ. ಹಾಗಗಿ ಸರ್ಕಾರ ವೆಸ್ಟ್ ಬೆಂಗಾಲ್ ನಿಂದ ಸರಬರಾಜು ಆಗುವ ಔಷಧಿಯನ್ನ ಬ್ಲಾಕ್ ಲೀಸ್ ಗೆ ಹಾಕಿದೆ. ಸರ್ಕಾರದ ಕ್ರಮ ಸರಿಯಿದೆ ಎಂದರು.