ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಚಾಲಕರ ಕಾರ್ಮಿಕರ ಘಟಕದ ವತಿತಿಂದ ಶಿವಮೊಗ್ಗ ಜಿಲ್ಲಾ ಚಾಲಕರಿಗೆ ಉಚಿತವಾಗಿ ಚಾಲಕರ ಲೇಬರ್ ಕಾರ್ಡ್ ನೀಡುವ ಕಾರ್ಯಕ್ರಮ ಜರುಗಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಸ್ಥಾಪಕ ಸತೀಶ್ ಹೆಚ್ (ದೇವು) ಡಿ.05 ಮತ್ತು ಡಿ.06 ರಂದು ಬೆಳಿಗ್ಗೆ 10-30 ಸಂಜೆ 6 ಗಂಟೆಯವರೆಗೆ ನಗರದ ದುರ್ಗಿಗುಡಿಯಲ್ಲಿ ನಡೆಯಲಿದೆ ಚಾಲಕರ ಲೇಬರ್ ಕಾರ್ಡ್ ಗೆ ಬೇಕಾಗುವ ದಾಖಲೆಗಳು ಆಧಾರ ಕಾರ್ಡ್, ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ, ಪಾಸ್ ಪೋರ್ಟ್ ಸೈಜ್ ನ ಫೋಟೊ ಬೇಕಾಗಿದೆ ಎಂದರು.
ಚಾಲಕರು/ಕಂಡೆಕ್ಟರ್/ಕ್ಲೀನರ್, ನಿಲ್ದಾಣದ ಸಿಬ್ಬಂದಿಗಳು, ಬುಕ್ಕಿಂಗ್ ಗುಮಾಸ್ತ, ನಗದು ಗುಮಾಸ್ತ, ಡೀಪೋ ಗುಮಾಸ್ತ, ಸಮಯ ಸೂಚಕ, ಕಾವಲುಗಾರ ಅಥವಾ ಪರಿಚಾರಕ, ಮೋಟಾರು ಗ್ಯಾರೇಜ್ ಸಿಬ್ಬಂದಿ, ಪಂಚರ ದುರಸ್ತಿ ಮಳಿಗೆ ಕಾರ್ಮಿಕ, ನಿಲ್ದಾಣ ಲೋಡಿಂಗ್, ಮೊದಲಾದ ಕಾರ್ಮಿಕರಿಗೆ ಈ ಕಾರ್ಯಕ್ರಮದಲ್ಲಿ ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಈ ಕಾರ್ಡ್ ಬಗ್ಗೆ ಕರೆ ಮಾಡಿದವರು 300-400 ಜನ ಚಾಲಕರು ಇದ್ದಾರೆ. ಆಟೋ 8 ಸಾವಿರ, ಬಸ್ ಚಾಲಕರು 6 ಸಾವಿರ ಜನರಿದ್ದಾರೆ ಎಂದರು. ಅಪಘಾತ ಸಂಭವಿಸಿ ಸಾವನ್ನಪ್ಪಿದರೆ ಪರಿಹಾರ ಸಿಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಸತೀಶ್, ಅನಿಲ್ ಕುಮಾರ್, ರಾಜೂ ಎಂ ಗೌರವಾಧ್ಯಕ್ಷ ಮೊದಲಾದವರು ಉಪಸ್ಥಿತರಿದ್ದರು.