ಸುದ್ದಿಲೈವ್/ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಮತ್ತು ದೇಶೀಯ ವಿದ್ಯಾಶಾಲಾ ಸಮಿತಿ, ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ 37 ನೇ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೆಹರೂ ಕ್ರೀಡಾಂಗಣದಲ್ಲಿ ಡಿ.4 ರಿಂದ ಡಿ.06 ರವರೆಗೆ ಈ ಕ್ರೀಡಾಕೂಟ ನಡೆಯಲಿದ್ದು, 51 ಕಾಲೇಜುಗಳ ಸುಮಾರು 712 ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. 455 ವಿದ್ಯಾರ್ಥಿಗಳಿದ್ದು, 257 ಜನ ವಿದ್ಯಾರ್ಥಿನಿಯರು, 160 ಜನ ಅಧಿಕಾರಿ ವರ್ಗ ಮತ್ತು ತಾಂತ್ರಿಕ ವರ್ಗ, 75 ಜನ ಸ್ವಯಂ ಸೇವಕರು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ ಭಾಗಿಯಾಗುವರಿಗೆಲ್ಲರಿಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೂಟದ ಮೂರನೇ ದಿನ ನಡದಯುವ ಮ್ಯಾರಥಾನ್ ಓಟವು ಎಂಆರ್ ಎಸ್ ವೃತ್ತದಿಂದ ಪ್ರಾರಂಭಿಸಿ ಲಕ್ಕಿನಕೊಪ್ಪ ಸರ್ಕಲ್ ತಿರುಗಿ 1 ಕಿಮಿ ವ್ಯಾಪ್ತಿಯವರೆಗೆ ನಡೆಯಲಿದೆ.