ಆಜಾನ್ ಟೂರ್ ಅಂಡ್ ಟ್ರಾವೆಲ್ಸ್ ನ ಮಾಲೀಕರಿಂದಲೇ ವಂಚನೆ-ಆಸಿಫ್ ಇಕ್ಬಾಲ್ ಸ್ಪಷ್ಟನೆ

 



ಸುದ್ದಿಲೈವ್/ಶಿವಮೊಗ್ಗ

ನಿನ್ನೆ ಉದ್ಯೋಗ ಕೊಡಿಸುವುದಾಗಿ  ಕೋಟ್ಯಾಂತರ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ  ಆಸಿಫ್ ಇಕ್ಬಾಲ್  ಸುದ್ದಿಲೈವ್ ಗೆ ಸ್ಪಷ್ಟನೆ ನೀಡಿದ್ದಾರೆ.

ಈ ವಂಚನೆಯು ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ಆಜಾನ್ ಟೂರ್ ಅಂಡ್ ಟ್ರಾವೆಲ್ಸ್ ನ ರಿಜ್ವಾನ್ ರಿಂದಲೇ ನಡೆದಿದ್ದು ಈ ಕುರಿತು ಮುಂಬೈನ ಡೋಂಗ್ರಿ ಪೊಲೀಸ್ ಠಾಣೆಯಲ್ಲಿ ದೂರೊಂದು ನೀಡಲಾಗಿದೆ ಎಂದು ಸ್ಪಷ್ಟಪಡೊಸಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ವಂಚನೆಯನ್ನ ರಿಜ್ವಾನ್ ಮತ್ತು ಮೊಹಮದ್ ಇರ್ಫಾನ್ ರಿಂದಲೇ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ಅಶೀಫ್, ಇವರಿಬ್ಬರು ಟೂರ್ಸ್ ಅಂಡ್ ಟ್ರಾವೆಲ್ಸ್ ನಷ್ಟ ಹೊಂದಿದ ಕಾರಣ ಹಜ್ ಮತ್ತು ಉಮ್ರಾ ಟೂರ್ ಮತ್ತು ಟ್ರಾವೆಲ್ಸ್ ನಮ್ಮೊಂದಿಗೆ ಶಿವಮೊಗ್ಗದಿಂದ ಆರಂಭಿಸುವುದಾಗಿ ಹೇಳಿ ನಮ್ಮ ಏಜೆನ್ಸಿ ಮೂಲಕ ವ್ಯವಹಾರ ಆರಂಭಿಸಿದ್ದಾರೆ. ನಮ್ಮದು ಅಧಿಕೃತ ಹಜ್ ಮತ್ತು ಉಮ್ರಾ ಟೂರ್ ಅಂಡ್ ಟ್ರಾವೆಲ್ಸ್ ಏಜೆನ್ಸಿಯಾಗಿದೆ ಎಂದು ತಿಳಿಸಿದ್ದಾರೆ. 

ನಮ್ಮ ವ್ಯವಹಾರದ ಪಾರ್ಟನರ್ ಆಗಿದ್ದ ಸಯ್ಯದ್ ಆಯೂಬ್ ಮೂಲಕ ರಿಜ್ವಾನ್ ಪರಿಚಯವಾಗಿ ಉಮ್ರಾ ಮತ್ತು ಹಜ್ ಯಾತ್ರೆಗೆ ಜನರನ್ನ‌ ಕಳುಹಿಸುವ ವ್ಯವಹಾರ ಆರಂಭಿಸಿದೆವು‌. ಆಗಸ್ಟ್ ನಲ್ಲಿ ಆರಂಭಿಸಿದ ವ್ಯವಹಾರದಲ್ಲಿ ರಿಜ್ವಾನ್ ಅವರ ಲೆಕ್ಕಾಚಾರ ಸರಿಬರಲಿಲ್ಲ.

ಈ ಮಧ್ಯೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ವ್ಯವಹಾರವನ್ನ ಆರಂಭಿಸಿದ್ದು ಯಾವುದಕ್ಕೂ ಲೆಕ್ಕಪತ್ರಗಳನ್ನ ಎನ್ ಟಿ ರಸ್ತೆಯ ಆಜಾನ್ ಟೂರ್ ಅಂಡ್ ಟ್ರ್ಯಾವೆಲ್ಸ್ ನ ಮಾಲೀಕ ರಿಜ್ವಾನ್ ಸರಿಯಾಗಿ ನೀಡದೆ ಇದ್ದದರಿಂದ ಆತನೊಂದಿಗಿನ ವ್ಯವಹಾರಗಳು ಮುರಿದು ಬೀಳುವ ಹಂತಕ್ಕೆ ಬಂದು ತಲುಪಿದೆ. 

ಆತ ಉಮ್ರಾಯಾತ್ರೆಗೆ ನೀಡಿರುವ  ಹಣದವರಿಗೆ ಕಳುಹಿಸಿಕೊಡಲಾಗಿದೆ. ಆತ ಉದ್ಯೋಗ ಕೊಡಿಸುವುದಾಗಿ ವಂಚನೆ ನಡೆದಿದೆ ಎಂದು ರಿಜ್ವಾನ್ ಅವರ ದೂರು ಸತ್ಯಕ್ಕೆ ದೂರವಾಗಿದೆ. ಅದು ಉಮ್ರಾ ಯಾತ್ರೆಯ ವ್ಯವಹಾರವಾಗಿದ್ದು ಅವರು ನೀಡಿದ 70 ಲಕ್ಷದ 22 ಸಾವಿರ ರೂ.ಗೆ ಯಾರು ಯಾರು ಉಮ್ರಾ ಯಾತ್ರೆಗೆ ಹೊರಟಿದ್ದಾರೆ ಅವರಿಗೆ ನಾವು ಯಾತ್ರೆ ಮಾಡಿಸಿದ್ದೇವೆ. ರಿಜ್ವಾನ್ 1,16‌,75,602 ರೂ ಹಣ ನಮಗೆ ಆತ ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close