ಸುದ್ದಿಲೈವ್/ಶಿವಮೊಗ್ಗ
ಬಾವಿಯಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಘಟನೆ ನಡೆದಿದ್ದು, ಆತನಿಗಾಗಿ ಶೋಧಕಾರ್ಯ ನಡೆದಿದೆ. ಶೋಧಕಾರ್ಯದಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ನಾಲ್ವರು ಬಾಲಕರು ಬಾವಿಯಲ್ಲಿ ಈಜಲು ಇಂದು ಸಂಜೆಯ ಹೊತ್ತಿಗೆ ತೆರಳಿದ್ದರು. ಈ ಸಂದರ್ಭ 8 ನೇ ತರಗತಿ ಓದುತ್ತಿದ್ದ ಆಪ್ನಾನ್ ನೀರು ಪಾಲಾಗಿದ್ದನು. ನೀರು ಪಾಲಾಗಿದ್ದ ಬಾಲಕನಿಗಾಗಿ ಶೋಧಕಾರ್ಯ ನಡೆದಿದೆ.
ರಾತ್ರಿ 8-30 ರವೇಳೆಗೆ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಬಾವಿ ಬಳಿ ಬಾಲಕನ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾಗಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಬಾಲಕನಿಗಾಗಿ ಹುಡುಕಾಟ ನಡೆಸಿದರು. ಅಪ್ನಾನ್ ಡಿವಿಎಸ್ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದನು. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.