ರಸ್ತೆಗುಂಡಿಗಳಿಂದ ವಾಹನ ಸವಾರರಿಗೆ ತೊಂದರೆ ನೋಡಲಾಗದೆ ಗುಂಡಿ ಮುಚ್ಚಿದ ಗ್ರಾಪಂ ಸದಸ್ಯ



ಸುದ್ದಿಲೈವ್/ಹೊಳೆಹೊನ್ನೂರು 

ರಸ್ತೆ ಗುಂಡಿಗಳಿಂದ ಗ್ರಾಮಸ್ಥರು ಅನುಭವಿಸುತ್ತಿರುವ ತೊಂದರೆಯನ್ನು ಮನಗಂಡ ಆನವೇರಿ ಗ್ರಾ,ಪಂ ವ್ಯಾಪ್ತಿಯ ಇಟ್ಟಿಗೆಹಳ್ಳಿಯ ಗ್ರಾ,ಪಂ ಸದಸ್ಯ ತಿಪ್ಪೇಶ್ ತಾವೇ ರಸ್ತೆ ಗುಂಡಿಗಳಿಗೆ ಮಣ್ಣು ಸುರಿದು ಗುಂಡಿ ಮುಚ್ಚಿ ತಮ್ಮೂರಿನ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.

ಆನವೇರಿ ಯಿಂದ ಇಟ್ಟಿಗೆಹಳ್ಳಿ ಸಂರ್ಪಕ ಕಲ್ಪಿಸುವ ಡಾಂಬರ್ ರಸ್ತೆ ಹಲವೇಡೆ ಸಂಪೂರ್ಣವಾಗಿ ಕಿತ್ತು ಹೋಗಿತ್ತು. ಮಳೆಯ ನೀರು ಗುಂಡಿಗಳಲ್ಲಿ ನಿಂತು ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿದವು. ಗುಂಡಿಯಮ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಓಡಾಡುವುದು ಸಹ ಕಷ್ಟವಾಗುತ್ತಿತ್ತು. ಅಲ್ಲದೆ ಕಳೆದ ಸೋಮವಾರ ಗ್ರಾಮದ ಆರಾದ್ಯ ದೈವ ಶ್ರೀ ಮಲ್ಲೇಶ್ವರ ಸ್ವಾಮಿ ಕದಲಿ ಹಾಗೂ ಕಾರ್ತಿಕೋತ್ಸವಕ್ಕೆ ಬರುವ ಭಕ್ತದಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಗ್ರಾಮದ ರಸ್ತೆ ಗುಂಡಿಯಾಗಿದರೆ ಭಕ್ತಾಧಿಗಳ ಓಡಾಟಕ್ಕೆ ಕಷ್ಠವಾಗುತ್ತದೆ ಎಂದು ತಿರ್ಮಾನಿಸಿದ ಗ್ರಾಪಂ ಸದಸ್ಯ ತಿಪ್ಪೇಶ್ ಭಾನುವಾರ ಸ್ಥಳೀಯ ಗುಡ್ಡವೊಂದರಿAದ ೪ ಟ್ರಾಕ್ಟರ್ ಲೋಡ್ ಮಣ್ಣು ತರಿಸಿ ತಾವೇ ಗುದ್ದಲಿ ಹಿಡಿದು ಪುಟ್ಟಿಗಳಲ್ಲಿ ಮಣ್ಣು ತುಂಬಿ ರಸ್ತೆಗೆ ಸುರಿದು ಗುಂಡಿಗಳನ್ನು ಮುಚ್ಚಿದ್ದಾರೆ.

ಇಟ್ಟಿಗೆಹಳ್ಳಿಯ ನೀರುಗಂಟಿ ಪರುಶುರಾಮ್ ಹಾಗೂ ಆನವೇರಿ ಗ್ರಾಪಂ ಕರವಸೂಲಿಗಾರ ರಘು ಹಾಗೂ ಇಟ್ಟಿಗೆಹಳ್ಳಿ ಯುವಕ ಸುನೀಲ್ ಗ್ರಾಪಂ ಸದಸ್ಯ ತಿಪ್ಪೇಶ್ ನೆರವಿಗೆ ಬಂದಿದ್ದಾರೆ. ನಾಲ್ಕು ಜನ ಸೇರಿ ರಸ್ತೆಯ ಗುಂಡಿಗಳಿಗೆ ಮಣ್ಣು ಸುರಿದು ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗ್ರಾಪಂ ಸದಸ್ಯ ಹಾಗೂ ಸಿಬ್ಬಂದಿಗಳು ಮಣ್ಣು ಸುರಿದು ಗುಂಡಿ ಮುಚ್ಚುವುದನ್ನು ದಾರಿ ಹೋಕರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಗ್ರಾಪಂ ಸದಸ್ಯರ ಕೆಲಸಕ್ಕೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಪಂ ತಿಪ್ಪೇಶ ಹಾಗೂ ಗ್ರಾಪಂ ಸಿಬ್ಬಂದಿಗಳಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close