ಸುದ್ದಿಲೈವ್/ಶಿವಮೊಗ್ಗ
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಜಿಲ್ಲಾ ಆಯ್ಕೆ ಸಮಿತಿ ರಚಿಸಿ ಸ್ಥಳೀಯರನ್ನ ನೇಮಿಸುವಂತೆ ಸೋಷಿಯಲ್ ಜಸ್ಟಿಸ್ ಪಬ್ಲಿಕ್ ಪ್ರಾಬ್ಲೆಮ್ ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಜಿಲ್ಲಾ ಆಯ್ಕೆ ಸಮಿತಿ ಆಯ್ಕೆಗೊಳಿಸಿದ ಗಂಧರ್ವ ನಗರ ಮತ್ತು ಶಾರದಾ ನಗರ ತಾತ್ಕಾಲಿಕ ಆಯ್ಕೆ ಪಟ್ಟಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿರುವುದರಿಂದ ಮಹಾನಗರ ಪಾಲಿಕೆ 31ನೇ ವಾರ್ಡಿನ ಸ್ಥಳಿಯ ಕಾರ್ಯಕರ್ತೆಯರನ್ನು ನೇಮಕ ಮಾಡುವಂತೆ ಮನವಿ ಮಾಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರ ಅಧಿಸೂಚನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ತಾತ್ಕಾಲಿಕ ಆಯ್ಕೆ ಮಾಡಲಾಗಿದ್ದು ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ನಗರ ಸಭೆ ಯಾಗಿದ್ದ 20 ವರ್ಷದ ಹಿಂದಿನ ವಾರ್ಡ್ಗಳಾದ ನ್ಯೂ ಮಂಡ್ಲಿ ವಾರ್ಡ್ ಸಂಖ್ಯೆ 25 ಕಂದಾಯ ವಾರ್ಡ್ ಎಂದು ಪರಿಗಣಿಸಲಾಗಿದೆ.
ಈಗಿರುವ ಹಾಲಿ ಹತ್ತು ವರ್ಷದಿಂದ ಕಾರ್ಪೊರೇಷನ್ ವಾರ್ಡ್ ಸಂಖ್ಯೆ 31 ಎಂದು ಮುಂದುವರೆಸಿಕೊಂಡು ಬಂದಿರುವ ಗಂಧರ್ವ ನಗರ ಶಾರದಾ ನಗರ ಮಹಾನಗರ ಪಾಲಿಕೆಯ 31ನೇ ವಾರ್ಡಿಗೆ ಆಯ್ಕೆಯಾಗಿರುವ ತಾತ್ಕಾಲಿಕ ಅಭ್ಯರ್ಥಿಗಳು 32ನೇ ವಾರ್ಡಿನ ಟಿಪ್ಪು ನಗರ ರವರು ಆಗಿದ್ದಾರೆ. ಒಂದೇ ಕೇರಿಯ ಇಬ್ಬರನ್ನು ಆಯ್ಕೆ ಮಾಡಿರುವುದು ಸಂಪೂರ್ಣ ಅವಜ್ಞಾನಿಕವಾಗಿದೆ ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ.
ಅಂಗನವಾಡಿಯ ಸ್ವಂತ ಕಟ್ಟಡ ಕಟ್ಟಲು ಸ್ಥಳೀಯರ ಸಹಕಾರವಿಲ್ಲದೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಸ್ಥಳೀಯರು ಸಹಕರಿಸಲು ಅಲ್ಲಿಯೇ ವಾಸಿಸುವ ಸ್ಥಳೀಯರನ್ನು ನೇಮಕ ಮಾಡಿದರೆ ಉತ್ತಮವಾಗಲಿದೆ. ಈ ಕುರಿತು ಸಾರ್ವಜನಿಕರ ಆಕ್ಷೇಪಣೆ ಹೊರಬೀಳುತ್ತಿದ್ದು, ತಾವುಗಳು ತಕ್ಷಣವೇ ಆನ್ಲೈನ್ ಮುಖಾಂತರ ಅರ್ಜಿ ಹಾಕಿರುವ ಏರಿಯ 31ನೇ ವಾರ್ಡಿನ ಸ್ಥಳೀಯರನ್ನು ನೇಮಕ ಮಾಡಿ ಸ್ಥಳ ವೀಕ್ಷಣೆ ಮತ್ತು ಆ ವಾರ್ಡಿನ ಹಾಲಿರುವ ಅಂಗನವಾಡಿ ಕಾರ್ಯಕರ್ತೆಯರ ಅಭಿಪ್ರಾಯ ಹಾಗೂ ಸ್ಥಳೀಯರ ಅಭಿಪ್ರಾಯ ಪಡೆದು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಬೇಕೆಂದು ಸಂಘನೆ ಕೋರಿದೆ.