ಸುದ್ದಿಲೈವ್/ಶಿವಮೊಗ್ಗ
ಫೆಂಗಲ್ ಚಂಡಮಾರುತದ ಎಫೆಕ್ಟ್ ಮುಂದುವರೆಯಲಿದ್ದು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಭಾನುವಾರ ಸಂಜೆಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಆಂತರಿಕ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದು ಬಾರಿ ಮಳೆಯಾಗಲಿದ್ದು ಮಂಗಳವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದರೆ, ಈ ಪ್ರದೇಶಗಳಲ್ಲಿ ಬುಧವಾರದಿಂದ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ
ಶಿವಮೊಗ್ಗ ನಗರದಲ್ಲಿ ಇಂದಿನಿಂದ ವಾಯುಭಾರ ಕುಸಿತದ ಪರಿಣಾಮವಾಗಿ ಹವಾಮಾನ ಇಲಾಖೆಯು ಶಿವಮೊಗ್ಗ ನಗರಕ್ಕೆ "Orange alert" ನೀಡಲಾಗಿದ್ದು ತುಂಗಾ ನದಿ ಪಾತ್ರದ/ಸಮೀಪದಲ್ಲಿ ವಾಸ ಮಾಡುತ್ತಿರುವ ಜನರು ಮುಂಜಾಗ್ರತೆ ಕ್ರಮ ವಹಿಸಲು ಹಾಗೂ ತುರ್ತು ಸಂದರ್ಭದಲ್ಲಿ ಸಹಾಯವಾಣಿ ನಂಬರ್ 18004257677 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಲು ಪಾಲಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗದಲ್ಲಿಯೂ ಕಳೆದ ಎರಡು ಗಂಟೆಯಿಂದ ಸತತ ಮಳೆಯಾಗುತ್ತಿತ್ತು. ಮಳೆ ಹೆಚ್ಷಳದ ಸಾಧ್ಯತೆ ಇದೆ.