ಹರ್ಷನ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ?

 


ಸುದ್ದಿಲೈವ್/ಶಿವಮೊಗ್ಗ

ಹರ್ಷನ ಕೊಲೆ ನಡೆದು ಎರಡು ವರ್ಷಗಳಾಗಿವೆ. ಎರಡು ವರ್ಷಗಳು ಕಳೆದರೂ ಪ್ರಕರಣ ಎನ್ಐಎ ಕೋರ್ಟ್ ನಲ್ಲಿ  ನಡೆಯುತ್ತಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರರಿಗೆ ಕೋರ್ಟಿಗೆ ಹಾಜರಾಗದಂತೆ ಈಗಲೂ‌ ಧಮ್ಕಿ, ಬೆದರಿಕೆ ಮೊದಲಾದ ಕೃತ್ಯಗಳು ಮುಂದು ವರೆದಿವೆಯಾ ಎಂಬ ಅನುಮಾನಕ್ಕೆ ಈ ಎಫ್ಐಆರ್ ಸಾಕ್ಷಿಯಾಗಿವೆ. 

ಫೆ.20 2022 ರಂದು ರಾತ್ರಿ 9 ಗಂಟೆಗೆ ಎನ್ ಟಿ ರಸ್ತೆಯ ಭಾರತೀ ಕಾಲೋನಿಯಲ್ಲಿ ಊಟಕ್ಕೆ ತೆರಳಿದ್ದ ಹರ್ಷನನ್ನ ಕೊಲೆ ಮಾಡಲಾಗಿತ್ತು. ಈ ಘಟನೆಯಲ್ಲಿ 12 ಕ್ಕೂ ಹೆಚ್ಚು ಜನರನ್ನ ಬಂಧಿಸಿ ಪೊಲೀಸರು ಎನ್ಐಎಗೆ ಪ್ರಕರಣವನ್ನ ಹಸ್ತಾಂತರಿಸಿದ್ದರು.

ಈ ಪ್ರಕರಣ ಬೆಂಗಳೂರು ಎನ್ಐಎಯಲ್ಲಿ ಈಗಲೂ ನಡೆಯುತ್ತಿದೆ. ಈ ಮಧ್ಯೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಹರ್ಷನ ಕೊಲೆ ವಿಚಾರದಲ್ಲಿ ಸಾಕ್ಷಿಯಾಗಿದ್ದವನಿಗೆ ಕೋರ್ಟ್ ಗೆ ಹಾಜರಾಗದಂತೆ ತಡೆಯುವ ಯತ್ನ ನಡೆದಿದೆ ಎಂಬ ಶಂಕೆಯ ಮೇಲೆ ದೂರೊಂದು ದಾಖಲಾಗಿದೆ.

ಹರ್ಷನನ್ನ ಕೊಲೆ ಪ್ರಕರಣದಲ್ಲಿ ಎ1 ಮೊಹಮ್ಮದ್ ಕಾಸಿಫ್, ಎ2 ಸೈಯದ್ ನದೀಮ್, ಎ3 ಆಸಿಫ್ ಉಲ್ಲಾ ಖಾನ್, ಎ4 ರಿಹಾನ್ ಷರೀಫ್​, ಎ5 ನಿಹಾನ್, ಎ6 ಅಬ್ದುಲ್ ಅಫ್ನಾನ್ ಸೇರಿ 12 ಜನ ಆರೋಪಿಗಳನ್ನ ಮೊದಲು ಬಂಧಿಸಲಾಗಿತ್ತು.

ಕೊಲೆ ಆರೋಪಿಗಳು ಹರ್ಷನನ್ನ ಕೊಲೆ ಮಾಡುವ ಮುಂಚೆ ಸೂಳೆಬೈಲಿನಲ್ಲಿರುವ ಪೆಟ್ರೋಲ್ ಪಂಪ್ ವೊಂದರಲ್ಲಿ ಕಾರಿಗೆ ಡಿಸೇಲ್ ತುಂಬಿಸಿಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಪೆಟ್ರೋಲ್ ಪಂಪ್ ನ ಯುವಕನನ್ನ ಎನ್ಐಎ ಸಾಕ್ಷಿ ಮಾಡಿತ್ತು.

ಆತನಿಗೆ ಡಿ.12 ರಂದು ಎನ್ಐಎ ಹರ್ಷನ ಮರ್ಡರ್ ವಿಚಾರದಲ್ಲಿ ಕೋರ್ಟ್ ಇತ್ತು. ಪೆಟ್ರೋಲ್ ಬಂಕ್ ಗೆ ಬಂದ ಅಪರಿಚಿತ ವ್ಯಕ್ತಿ ಸಾಕ್ಷಿ ಹೇಳುವ ಯುವಕನ ಹೆಸರು ಕೇಳಿದ್ದಾನೆ. ಆತನಿಗೆ ಕೋರ್ಟ್ ಗೆ ಹಾಜರಾಗದಿರಲು ಹೇಳಿ ಎಂದು ಹೇಳಿದ್ದಾನೆ. ಆ ಹುಡುಗ ಈಗ ಇಲ್ಲಿ ಕೆಲಸ ಮಾಡುತ್ತಿಲ್ಲ  ಎಂದು ಸಹಪಾಠಿಗಳು ಹೇಳಿದಾಗ ವಾಪಾಸ್ ಆಗಿದ್ದಾನೆ. 

ಈ ಪ್ರಕರಣ ಅಸಂಜ್ಞೆ ಪ್ರಕರಣ ದಾಖಲಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ  ತುಂಗನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close