ಸುದ್ದಿಲೈವ್/ಶಿವಮೊಗ್ಗ
ತಾಲೂಕಿನ ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡಿಕೆಗಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರೊರಾತ್ರಿ ಅಡಿಕೆ ತೋಟಕ್ಕೆ ನುಗ್ಗಿ ಮರದಿಂದಲೇ ಅಡಿಕೆಗೊಂಚಲುಗಳನ್ನ ಕ್ವಿಂಟಾಲ್ ಗಟ್ಟಲೆ ಕಳುವು ಮಾಡುತ್ತಿರುವ ಬಗ್ಗೆ ವರದಿಯಾಗಿದೆ.
ಒಂದು ವಾರದ ಹಿಂದೆ ಭದ್ರಾವತಿಯ ಕಾಕನ ಹೊಸೂಡಿಯಲ್ಲಿ ಈಶಣ್ಣನವರ ತೋಟ ಸೇರಿ ಇಬ್ಬರ ತೋಟದಲ್ಲಿ ಅಡಿಕೆಗಳ್ಳರು ಅಡಿಕೆ ಕಳ್ಳತನ ನಡೆದಿದೆ. ತಲಾ ತೋಟದಿಂದ 10-12 ಕ್ವಿಂಟಾಲ್ ಹಸಿ ಅಡಿಕೆ ಕಳ್ಳತನವಾಗಿದೆ. ಈ ಬಗ್ಗೆ ಈಶಣ್ಣ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಂಬ್ಳೆಬೈಲಿನಲ್ಲಿ ನಿನ್ನೆ ರಾಮೇಗೌಡರ ತೋಟದಲ್ಲಿ ಕಳ್ಳತನ ನಡೆದಿದೆ. ಅಡಿಕೆ ಮರಗಳನ್ನ ಹತ್ತಿ ಇಲ್ಲೂ ಸಹ 10-12 ಕ್ವಿಂಟಾಲ್ ಅಡಿಕೆ ಕಳುವಾಗಿದೆ. ಎರಡು ದಿನ ಹಿಂದೆ ಕೃಷ್ಣೇಗೌಡರ ತೋಟದಲ್ಲಿ ಸಹ 15 ಕ್ವಿಂಟಾಲ್ ಹಸಿ ಅಡಿಕೆ ಕಳುವು ಮಾಡಲಾಗಿದೆ.
ಈ ಬಗ್ಗೆ ಕೃಷ್ಣೇಗೌಡರು ಮತ್ತು ರಾಮೇಗೌಡರು ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಸುದ್ದಿಲೈವ್ ಗೆ ಮಾಹಿತಿ ನೀಡಿದ ಉಂಬ್ಳೆಬೈಲಿನ ಗ್ರಾಮಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಈಗ ಅಡಿಕೆ ಸೀಸನ್ ಇದೆ.
ಬಾಳೆಹೊನ್ನೂರಿಗೆ ವಾಹನಗಳು ಇಲ್ಲಿಂದ ಲೋಡ್ ಮಾಡಿಕೊಂಡು ಹೋಗುತ್ತಾರೆ. ರಾತ್ರಿ ಹೊತ್ತು ಕಾವಲು ಇಲ್ಲದ ಕಾರಣ ಕಳುವು ಹೆಚ್ಚಾಗಿದೆ. ಪೊಲೀಸರು ಅಡಿಕೆಕಳ್ಳರಿಂದ ರೈತರಿಗೆ ಮುಕ್ತಿದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.