ಸುದ್ದಿಲೈವ್/ತೀರ್ಥಹಳ್ಳಿ
ಶಿಕ್ಷಕರ ನಡುವಿನ ವಾಟ್ಸಪ್ ಗುದ್ದಾಟ ತಾರಕಕ್ಕೇರಿದ್ದರೂ ಕ್ರಮ ಜರುಗಿಸದೆ ಬಿಇಒ ವಿರುದ್ಧವೇ ಆರೋಪ ಕೇಳಿಬರುತ್ತಿದೆ. ಪಠ್ಯೇತರ ಚಟುವಟಿಕೆಯಲ್ಲಿ ಬಿಇಒ ಮೂಗು ತೂರಿಸದೆ ಮೌನ್ಯಕ್ಕೆ ಜಾರಿದರೆ ಮುಂದಿನ ಬೆಳವಣಿಗೆಗೆ ಜವಬ್ದಾರರಾಗ್ತಾರಾ ಎಂಬ ಪ್ರಶ್ನೆ ಸಹ ಕೇಳಿ ಬರುತ್ತಿದೆ.
ಮoಡಗದ್ದೆ ಸಿ ಆರ್ ಪಿ ಕ್ಲಸ್ಟರ್ ಕೇಂದ್ರ ದ ಬಲವರ್ಧನೆಗೆoದು ಅಧಿಕ ಮೊತ್ತದ ಹಣವನ್ನು ಸಾರ್ವಜನಿಕರಿoದ, ಕ್ಲಸ್ಟರ್ ನ ಶಿಕ್ಷಕರಿoದ ಸಂಗ್ರಹಿಸಿರುವುದರ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು ದೂರು ನೀಡಿ ಆರು ತಿಂಗಳಾದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ಧೋರಣೆ ಕ್ಷೇತ್ರ ಶಿಕ್ಷಣಾಧಿಕಾರಿಗಳವರು ಮಾಡುತ್ತಿದ್ದಾರೆ.ಮoಡಗದ್ದೆ ಸಿ ಆರ್ ಪಿ ಇಲಾಖಾ ಅನುಮತಿ ಪಡೆದಿರುವುದಿಲ್ಲ ಎಂದು ದಲಿತ ಸಂಘಟನೆ ದೂರಿದೆ.
ಸಿ ಆರ್ ಪಿ ರವರು ಕಳೆದ ಜೂನ್ ತಿಂಗಳಿನಲ್ಲಿ ಇನ್ನೊರ್ವ ಶಿಕ್ಷಕಿಯ ಮೇಲೆ ಅನಾವಶ್ಯಕವಾಗಿ ಶಿಕ್ಷಕರ ವಾಟ್ಸಪ್ ಗುಂಪಿನಲ್ಲಿ ಅಶ್ಲೀಲಕರ ಅವಮಾನಕರ ಮೆಸೆಜ್ ಮಾಡಿರುವ ಬಗ್ಗೆ ನೊಂದ ಶಿಕ್ಷಕಿ ಹಾಗೂ ದಲಿತ ಸoಘರ್ಷ ಸಮಿತಿಯ ಜಿಲ್ಲಾ ಸoಚಾಲಕರಾದ ಎo.ಏಳುಕೋಟಿ ರವರು ಹಲವಾರು ಬಾರಿ ದೂರು ನೀಡಿದರೂ ಸಿ ಆರ್ ಪಿ ರವರ ಮೇಲೆ ಈವರೆಗೂ ಅವರ ದುರ್ವರ್ತನೆಯ ಬಗ್ಗೆ ಶಿಸ್ತು ಕ್ರಮ ಜಾರಿಯಾಗಿಲ್ಲವೆಂದು ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮoಡಗದ್ದೆ ಸಿ ಆರ್ ಪಿ ರವರ ದುರ್ವರ್ತನೆ ಮಿತಿಮೀರಿದ್ದು, ದಬ್ಬಾಳಿಕೆ ,ಹಣ ಸಂಗ್ರಹ ಮಾಡಿ ದುರುಪಯೋಗ, ಅಶ್ಲೀಲ ಪದ ಬಳಕೆ , ಕೊಲೆ ಬೆದರಿಕೆಯoಥಹ ಮೆಸೆಜ್ ಗಳನ್ನು ವಾಟ್ಸಪ್ ನಲ್ಲಿ ಹಾಕಿ ಅವರ ಮೇಲೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಪುರುಷ ಶಿಕ್ಷಕರನ್ನು ಹೆದರಿಸುವುದು. ಇತ್ಯಾದಿ ದುರ್ವರ್ತನೆ ಕಂಡು ಬoದಿದ್ದರೂ ತನಿಖೆ, ವಿಚಾರಣೆ ನಡೆಸದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಜಾ ತೆಗೆದುಕೊಂಡ್ರಾ ಎಂಬ ಅನುಮಾನಕ್ಕೆ ಈ ಪ್ರಕರಣ ಎಡೆಮಾಡಿಕೊಟ್ಟಿದೆ.
ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರೆ ಇಷ್ಟುಹೊತ್ತಿಗೆ ಬಿಇಒರವರ ಜವಬ್ದಾರಿಯೇ ಮುಗಿದುಹೋಗಿರುತ್ತಿತ್ತು. ಪಠ್ಯೇತರ ಕ್ರಮವಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಕ್ರಮ ಜರುಗಿಸದೆ ಇರುವುದು ಎಷ್ಟು ಸಮಂಜಸ? ಹೋಗಲಿ ಯಾರನ್ನೂ ಉಳಿಸುವ ಕೆಲಸಕ್ಕೆ ಮುಂದಾದ್ರಾ ಬಿಇಒ ಎಂಬ ಅನುಮಾನಕ್ಕೂ ಕಾರಣವಾಗಿದೆ. ಈ ಪ್ರಕರಣ ಆರು ತಿಂಗಳಿನಿಂದ ಶಿಕ್ಷಣ ಇಲಾಖೆಯ ಗಮನದಲ್ಲಿದ್ದರೂ ಅವರ ಮೇಲೆ ಶಿಸ್ತುಕ್ರಮ ಜರುಗಿಸದೆ ನಿರ್ಲಕ್ಷತನ ಪಕ್ಷಪಾತ ಧೋರಣೆ ಮಾಡುತ್ತಿರುವುದಾಗಿ ದಲಿತ ಸಂಘರ್ಷ ಸಮಿತಿಗಳು ಆರೋಪಿಸುತ್ತಿವೆ.
ತೀರ್ಥಹಳ್ಳಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಆಡಳಿತದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಯಿಲ್ಲವೆoಬ ಆರೋಪವನ್ನ ಸಂಘಟನೆ ಮಾಡಿದ್ದಲ್ಲದೆ ಕೆಡಿಪಿ ಸಭೆಯಲ್ಲಿ ಸಿ ಆರ್ ಪಿ ಯವರ ದುರ್ವರ್ತನೆ ಯ ಬಗ್ಗೆ ಪ್ರಶ್ನಿಸಿದಾಗಲೂ ಸಮoಜಸ ಉತ್ತರ ನೀಡದೇ..ಸಭೆಗೆ ತಪ್ಪು ಮಾಹಿತಿ ನೀಡಿ ಅಸಹಾಯಕರoತೆ ನಿಂತಿದ್ದು ವಿಷಾದನೀಯ ಎಂದು ಸಂಘಟನೆ ದೂರಿದೆ.
ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಜಿಲ್ಲಾ ಸoಚಾಲಕರಾದ ಎಂ ಏಳುಕೋಟಿ ರವರು...ನೊಂದ ಶಿಕ್ಷಕಿಗೆ ಇನ್ನಿತರ ಶಿಕ್ಷಕರಿoದಲೂ ಕಿರುಕುಳಗಳಾಗಿ ಶಿಕ್ಷಕಿ ಅಧಿಕ ಒತ್ತಡದಿಒದ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಶಿಕ್ಷಣ ಇಲಾಖೆ ಸೌಹಾರ್ಧತೆ ಸಹಕಾರ ಸಹಬಾಳ್ವೆ ಬೆಳೆಸುವ ಕೇಂದ್ರ ವೇ..? ಅಥವಾ ಒಬ್ಬರನ್ನು ತುಳಿದು ಒಬ್ಬರ ಮಾನ ಪ್ರಾಣ ತೆಗೆಯುವ ಷಡ್ಯoತ್ರದ ಕೂಟವೇ?
ಮoಡಗದ್ದೆ ಸಿ ಆರ್ ಪಿ ಗೆ ಕಾಣದ ಕೈಗಳು ಕುಮ್ಮಕ್ಕು ನೀಡಿ ಈ ಕೃತ್ಯಗಳನ್ನೆಲ್ಲಾ ಮಾಡಿ ಸುತ್ತಿರುವುದು ನಮ್ಮ ಸಮಿತಿಯ ಗಮನದಲ್ಲಿದೆ.ಎಲ್ಲಾ ದಾಖಲೆ ಮಾಹಿತಿಯನ್ನು ಕಲೆ ಹಾಕಿಯೇ ಮ oಡಗದ್ದೆ ಸಿ ಆರ್ ಪಿ ಯ ಮೇಲೆ ದೂರು ಬರೆಯಲಾಗಿದೆ.ಸಿ ಆರ್ಪಿ ರವರ ದುರ್ವರ್ತನೆ ಖಂಡಿಸುತ್ತಾ, ಇವರ ಮೇಲೆ ಸೂಕ್ತ ಶಿಸ್ತು ಕ್ರಮ ಜಾರಿಯಾಗಲೇಬೇಕು ಎಂದು ನಮ್ಮ ಸಮಿತಿ ಆಗ್ರಹಿಸುತ್ತಿದೆ ಎಂದು ಜಿಲ್ಲಾ ಸoಚಾಲಕರಾದ ಎಮ್.ಏಳುಕೋಟಿ ರವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.