ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮೆಗ್ಗಾನ್ ನಲ್ಲಿ ಕೆಲ ಘಟಕಗಳು ತಿದ್ದಲು ಆಗದಂತಹ ವಿಭಾಗಗಳಿವೆ. ಆದರೆ ಇನ್ನುಳಿದ ಘಟಕಗಳಲ್ಲಿ ಉತ್ತಮ ಸೇವೆ ದೊರೆಯುತ್ತಿರುವುದು ಸಹ ಅಷ್ಟೆ ಸತ್ಯ.
ಮಕ್ಕಳ ತೀವ್ರಘಟಕ, ಮಕ್ಕಳ ಆರೈಕೆ ಘಟಕ, ಬಡವರ ಆರೋಗ್ಯದಲ್ಲಿ ಉತ್ತಮ ಸೇವೆಗಳನ್ನ ನೀಡುತ್ತಾ ಬಂದಿವೆ. ಎದೆಹಾಲಿನ ಬ್ಯಾಂಕ್, ಕೀಮೋಥೆರಪಿ ಸಹ ಅರಂಭಿಸಲಾಗಿದ್ದು, ಕ್ಯಾಥ್ ಲ್ಯಾಬ್(ಸ್ಟಂಟ್), NICU ನವಜಾತ ಶಿಶುಗಳ ಆರೈಕೆ ಘಟಕ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದರಿಂದ ಅದೆಷ್ಟೋ ಜೀವಗಳ ಸಂರಕ್ಷಣೆ ಮಾಡಲಾಗಿದೆ.
ಈ ಉತ್ತಮ ಕಾರ್ಯಕ್ಕೆ ಇಬ್ಬರು ಅಧಿಕಾರಿಗಳನ್ನ ಹೊಗಳಲೇ ಬೇಕು. ಇದರಿಂದ ಅದೆಷ್ಟೋ ಜೀವಗಳು ಉಳಿದಿವೆ ಎಂದರೆ ತಪ್ಪಾಗಲಾರದು. ಕೆಲ ಸಮಸ್ಯೆಗಳು ಹಾಗೆ ಇವೆ ಇದೆ ನಿಜ. ಆದರೆ ಸಮಸ್ಯೆಗಳನ್ನ ಒಪ್ಪಿಕೊಳ್ಳುವುದರ ಜೊತೆಗೆ ಅಧಿಕಾರಿಗಳಶ್ರಮ ಮತ್ತು ಕೆಲ ವ್ಯವಸ್ಥೆಗಳ ಅನುಕೂಲಗಳನ್ನ ಇಲ್ಲಿ ಸ್ಮರಿಸಲೇ ಬೇಕು.
ಮಿಲ್ಕ್ ಬ್ಯಾಂಕ್ ಆರಂಭವಾದ ದಿನದಿಂದ ಇದುವರೆಗೂ 1000 ನವಜಾತ ಮಕ್ಕಳ ಸಂರಕ್ಷಣೆ ನಡೆದಿದೆ. ಮಿಲ್ಕ್ ಬ್ಯಾಂಕ್ ಆರಂಭವಾಗುವ ಮೊದಲು ಪ್ಯಾಕೆಟ್ ಪೌಡರ್ ನ ಹಾಲು ಮಕ್ಕಳಿಗೆ ಉಣಿಸಲಾಗುತ್ತಿತ್ತು. ಯಾವಾಗ ಮಿಲ್ಕ್ ಬ್ಯಾಂಕ್ ಆರಂಭವಾದವು ಅಂದಿನಿಂದ ನವಜಾತ ಶಿಶುಗಳ ಮರಣದ ಸಂಖ್ಯೆ ಶೇ.14% ರಷ್ಟು ಕುಗ್ಗಿಸಲಾಗಿದೆ.
ಮಗುವಿನ ಜನನವಾದರೆ ಸಾಲದು, ಮಗುವಿನ ಜನನದ ಜೊತೆಗೆ ತಾಯಿ ಎದೆ ಹಾಲು ಸಹ ಉತ್ಪತ್ತಿಯಾದರೆ ಮಗುವಿನ ಪೋಷಣೆಗೆ ಅನುಕೂಲವಾಗಲಿದೆ. ಕೆಲ ತಾಯಂದಿರಿಗೆ ಎದೆಹಾಲಿನ ಕೊರತೆಯನ್ನ ಈ ಮಿಲ್ಕ್ ಬ್ಯಾಂಕ್ ನೀಗಿಸಿದೆ. ಇದಕ್ಕೆ ಒಂದು ಉದಾಹರಣೆಯನ್ನೂ ಕೊಟ್ಟು ಮಿಲ್ಕ್ ಬ್ಯಾಂಕ್ ವಿಷಯವನ್ನ ಮುಗಿಸ್ತೀನಿ ಕೇಳಿ.
ಕೋಲಾರದ ತಾಯಿಯೊಬ್ಬಳಿಗೆ ನವಜಾತ ಅವಳಿ ಜವಳಿ ಮಕ್ಕಳು ಹುಟ್ಟಿತ್ತು. ಈ ಅವಳಿ ಮಕ್ಕಳಿಗೆ ತಾಯಿಯ ಎದೆಹಾಲಿನ ಕೊರತೆ ಕಂಡು ಬಂದಿತ್ತು. ಕೋಲಾರದ ಪಕ್ಕದ್ದೇ ರಾಜ್ಯದ ರಾಜಧಾನಿ ಬೆಂಗಳೂರು ಇದ್ದರೂ ಅಲ್ಲಿ ಹಾಲು ದೊರೆತಿರಲಿಲ್ಲ. ಈ ಅವಳಿಮಕ್ಕಳನ್ನ ಬದುಕಿಸಿದ ಕೀರ್ತಿ ನಮ್ಮ ಮೆಗ್ಗಾನ್ ಗೆ ಸಲ್ಲುತ್ತದೆ.
ಇದಾದ ನಂತರ ಕೆಎಸ್ ಆರ್ ಟಿಸಿ ಸಿಬ್ಬಂದಿಗಳಿಗೆ ಮೆಗ್ಗಾನ್ ನಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ದೊರೆಯಲಿದೆ. ಸಂಸ್ಥೆಯ ಯಾವುದೇ ಸಿಬ್ಬಂದಿ ಕಾರ್ಡ್ ತೋರಿಸಿದರೆ ಅವರಿಗೆ ಚಿಕಿತ್ಸೆ ಸಿಗಲಿದೆ. ಕೆಎಸ್ ಆರ್ ಟಿಸಿ ಎಂಡಿ ಅಂಬುಕುಮಾರ್ ಈ ಬಗ್ಗೆ ತಿಳಿಸಿದ್ದರಿಂದ ಮೆಗ್ಗಾನ್ ನಲ್ಲಿ ಕೆಎಸ್ಆರ್ ಟಿಸಿ ಸಿಬ್ಬಂದಿಗಳಿಗೆ ಶೀಘ್ರದಲ್ಲಿಯೇ ಈ ಸೇವೆ ದೊರಯಲಿದೆ.
ಇನ್ನೂ ನವಜಾತ ಶಿಶುಗಳ ಆರೈಕೆಗೆ ಎನ್ಐಸಿಯು ಘಟಕ ಆರಂಭಿಸಲಾಗಿದೆ. ಇದರಿಂದಲೂ ಮಕ್ಕಳ ಅದೆಷ್ಟೋ ಜೀವವನ್ನ ಉಳಿಸಲಾಗಿದೆ. ಇಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ, ಗುಣಮಟ್ಟದ ಆರೈಕೆ ಮಾಡಲಾಗುತ್ತಿದ್ದು ಮಕ್ಕಳ ಆರೈಕೆಯನ್ನ ಜೋಪಾನವಾಗಿ ಮಾಡಲಾಗುತ್ತಿದೆ.
ಕಳೆದ ಎರಡು ವರ್ಷದಿಂದ ಕ್ಯಾತಲ್ಯಾಬ್ ( ಸ್ಟಂಟ್) ಆರಂಭಗೊಂಡ ಕಾರಣ ಕಡಿಮೆ ದರದಲ್ಲಿ ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಈ ಚಿಕಿತ್ಸೆ ಮೆಗ್ಗಾನ್ ನಲ್ಲಿ ಉಚಿತವಾಗಿದೆ. ತಿಂಗಳಿಗೆ 40-50 ಜನ ಇದರ ಲಾಭ ಪಡೆಯುತ್ತಿದ್ದಾರೆ. ಬಡವರ ಆಶಾಕಿರಣವಾಗಿ ಮೆಗ್ಗಾನ್ ಕಂಗೊಳಿಸುತ್ತಿದೆ. ಅವ್ಯವಸ್ಥೆಗಳ ನಡುವೆ ಒಂದಿಷ್ಟು ಒಳ್ಳೆಯ ಕೆಲಸಗಳನ್ನ ಮಾಡಲಾಗುತ್ತಿದೆ. ಅದನ್ನ ಜನರಿಗೆ ಮುಟ್ಟಿಸುವುದು ಸಹ ಮಾಧ್ಯಮಗಳ ಕರ್ತವ್ಯನೂ ಹೌದು.
ಅದಕ್ಕೆ ಮೊದಲೇ ಹೇಳಿದಂತೆ ಮೆಗ್ಗಾನ್ ನ ಕೆಲ ಅಧಿಕಾರಿಗಳಿಂದ ಒಂದಿಷ್ಟು ಕೆಲಸ ಆಗ್ತಾ ಇದೆ. ಅದಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಅಧಿಕಾರಿ ಡಾ. ಸಿದ್ದನಗೌಡ ಮತ್ತು ಅಧೀಕ್ಷಕ ಡಾ.ತಿಮ್ಮಪ್ಪನವರ ಶ್ರಮವೂ ಸಹ ಕಾರಣ ಎಂದರೆ ತಪ್ಪಾಗಲಾರದು.