ಸುದ್ದಿಲೈವ್/ಶಿವಮೊಗ್ಗ
ಶಾಲಾ ಕಡೆ ತೆರಳುತ್ತಿದ್ದ ಶಾಲಾ ಬಸ್ ಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಶಾಲಾ ಬಸ್ ಡಿಕ್ಕಿ ಉಂಟಾಗಿದ್ದು ಇಬ್ವರು ಮಕ್ಕಳಿಗೆ ಗಾಯಗಳಾಗಿವೆ.
ಶಾಲಾ ಮಕ್ಕಳನ್ನ ತುಂಬಿಸಿಕೊಂಡು ಪೋಡಾರ್ ಶಾಲೆಕಡೆ ಹೊರಟಿದ್ದ ಬಸ್ ಗೆ ಹಿಂಬದಿಯಿಂದ ಬಂದ ಪಿಇಎಸ್ ಶಾಲಾ ಬಸ್ ಡಿಕ್ಕಿ ಉಂಟಾಗಿದೆ. ಡಿಕ್ಕಿಯಲ್ಲಿ ಪಿಎಸ್ ಕಾಲೇಜು ಬಸ್ ಮುಂಭಾಗ ಜಕಂ ಆಗಿದೆ. ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ. ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪೂರ್ವ ಸಂಚಾರಿ ಪೊಲೀಸ್ ರು ಸ್ಥಳಕ್ಲೆ ಧಾವಿಸಿದ್ದಾರೆ. ಘಟನೆ ವಡ್ಡಿನಕೊಪ್ಪದಲ್ಲಿ ಘಟನೆ ನಡೆದಿದೆ.