ನೋವಾಗಿದೆ, ಜನರೇ ಉತ್ತರಿಸಲಿದ್ದಾರೆ ಎಂದು ಎಂಎಲ್ ಸಿ ಡಾ.ಸರ್ಜಿ ಹೇಳಿದ್ದೇಕೆ?


ಸುದ್ದಿಲೈವ್/ಶಿವಮೊಗ್ಗ

ಬಸವಣ್ಣನವರು ಹೊಳೆಗೆ ಹಾರಬೇಕು ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದ ಶಾಸಕ ಯತ್ನಾಳ್ ಹೇಳಿಕೆಗೆ ಎಂಎಲ್ ಸಿ ಡಾ.ಧನಂಜಯ ಸರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. 

ವಕ್ಫ್ ಹೋರಾಟದಲ್ಲಿ ಬಸವಣ್ಣನವರ ಹಾಗೆ ಹೊಳೆ ಹಾರಬೇಕು ಎನ್ನುವ ಮೂಲಕ ಬಸವಣ್ಣನವರನ್ನು ಪಲಾಯನವಾದಿ ಎಂಬರ್ಥದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್ ಮಾತನಾಡಿದ್ದಾರೆ ಎಂದು ಬಿಂಬಿಸಲಾಗಿದ್ದು ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಡಾ.ಸರ್ಜಿ ಪ್ರತಿಯಿಸಿದರು. 

ಇದು ನೋವಾಗಿದೆ. ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುತ್ತಾರೆ ಎನ್ನುವ ಮೂಲಕ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 



ದೀಕ್ಷಾ ಕಾರ್ಯಕ್ರಮ

ಬಸವಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿಗಳವರ ಚಿನ್ಮಯಾನುಗ್ರಹ ದೀಕ್ಷ ಸಮಾರಂಭವು ಡಿ.5 ರಂದು ನಡೆಯಲಿದ್ದು, ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮರುಘಾ ರಾಜೇಂದ್ರ ಮಹಾಸ್ವಾಮಿಗಳು ತಮ್ಮ ಲಿಂಗಹಸ್ತ ಹಸ್ತದಿಂದ ದೀಕ್ಷೆ ಅನುಗ್ರಹಿಸಲಿದ್ದಾರೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಎಂಎಲ್ ಸಿ ರುದ್ರೇಗೌಡ, ಚಿನ್ಮಯಾನಂದ ದೀಕ್ಷೆ ಎಂದರೆ ಭಗವಂತನ ಜ್ಞಾನಸ್ವರೂಪಿ ಅನುಗ್ರಹವನ್ನ ನೀಡುವ ಆದ್ಯಾತ್ಮಕ ಕಾರ್ಯಕ್ರಮವಾಗಿದೆ. ಇದು ಬೌತಿಕ ಪೂಜಾ ಪ್ರಕ್ರಯೆಗಳಿಂದ ನುಕ್ತವಾಗಿದೆ. ಜೀವಾತ್ಮ ಮತ್ತು ಪರಮಾತ್ಮನ ಏಕತೆಯನ್ನ ಅನುಭವಿಸುವ ಪರಮಜ್ಞಾನವಾಗಿದೆ ಎಂದರು. 

ಡಿ.5 ರ ಬೆಳಿಗ್ಗೆ 11 ಗಂಟೆಗೆ ಮಾಚೇನಹಳ್ಳಿ ಡೈರಿ ಪಕ್ಕದಲ್ಲಿರುವ ಬಸವನೆಲೆಗೆ ನೀಡಿರುವ ಜಾಗದಲ್ಲಿ ನಡೆಯುವ ಬಹರಂಗ ಅಧಿವೇಶನದಲ್ಲಿ ಈರ್ವರ ಶ್ರೀಗಳ ಜೊತೆಯಲ್ಲಿ ನಿಟ್ಟೂರಿನ ಬ್ರಹ್ಮಶ್ರೀ ನಾರಾಯಣಗುರು ಪೀಠದ ಜಗದ್ಗುರು ರೇಣುಕಾನಂದ ಮಹಾಸ್ವಾಮಿಗಳು ಹಾಗೂ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.


ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ, ದೀಕ್ಷೆಯ ಕುರಿತು ಸಂಶೋಧಕರಾದ ಡಾ.ವೀರಣ್ಣ ರಾಜೂರ ಅವರಿಂದ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ಬೆಳಗ್ಗಿನ ಜಾವ 4-30 ಗಂಟೆಗೆ ನಗರದ ವೆಂಕಟೇಶ್ ನಗರದಲ್ಲಿರುವ ಬಸವಕೇಂದ್ರದಲ್ಲಿ ದೀಕ್ಷೆ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್, ಎಸ್ ಪಿ ದಿನೇಶ್, ಒಪನ್ ಮೈಂಡ್ ಕಿರಣ್, ವಿಜಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close