ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ ಅಂತರಗಂಗೆಯಲ್ಲಿಅಕ್ರಮ ಅದಿರು ತೆಗೆಯುವ ಮತ್ತು ಸಾಗಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರು ಸುಲಭವಾಗಿ ಆಗಿದ್ದಲ್ಲವೆಂಬ ಮಾಹಿತಿ ಸಹ ಹೊರಬಿದ್ದಿದೆ.
ಈ ಘಟನೆ ನಡೆದು ಸರಿ ಸಮಾರು 10 ದಿನ ಕಳೆದಿದೆ. 10 ದಿನಗಳ ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಡಿ.5 ರಂದು ಎಫ್ಐಆರ್ ಮಾಡಿಕೊಂಡಿದೆ. ಈ ಎಫ್ಐಆರ್ ನ್ನ ಜೈಭೀಮ್ ಯುವ ಕ್ರಾಂತಿ ಸಂಘಟನೆಯ ಅತಿರಥ ಪರಿಶ್ರಮದಿಂದ ದೂರು ದಾಖಲಾಗಿದೆ.
ಇದರಿಂದ ಭದ್ರಾವತಿಯಲ್ಲಿ ಯಾವುದೇ ಎಫ್ಐಆರ್ ಗಳು ಸಲೀಸಾಗಿ ದೂರು ದಾಖಲಾಗುತ್ತವೆ ಎಂಬ ಭ್ರಮೆಯಲ್ಲಿದ್ದರೆ ಅದು ಸುಳ್ಳು ಎಂದು ಈ ಘಟನೆಯ ಮೂಲಕ ತಿಳಿದು ಬಂದಿದೆ. ಲೋಕಾಯುಕ್ತ ಬೆಂಗಳೂರಿನವರಿಗೆ ಸೂಚಿಸಿದ ಮೇರೆಗೆ ದೂರು ದಾಖಲಾಗಿದೆ.
ಘಟನೆಯ ವಿವರ
ಭದ್ರಾವತಿ ತಾಲೂಕು ಅಂತರ ಗಂಗೆ ಸರ್ವೆ ನಂಬರ್ 20 ರಲ್ಲಿ ಕ್ರಮಸಂಖ್ಯೆ ಕೆಎ 19 ಎಬಿ 1522 ಕ್ರಮ ಸಂಖ್ಯೆಯ ಲಾರಿಯು ಕಬ್ಬಿಣದ ಅದಿರನ್ನ ತುಂಬಿಸಿಕೊಂಡು ಅಕ್ರಮ ಸಾಗಾಟ ಮಾಡುತ್ತಿರುವ ಬಗ್ಗೆ ತಹಶೀಲ್ದಾರ್ ಗೆ ಮಾಹಿತಿ ಲಭ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿ ಆಧಾರದ ಮೇರೆಗೆ ತಹಶೀಲ್ದಾರ್ ಅವರು ಸ್ಥಳಕ್ಕೆ ಧಾವಿಸಿ ಲಾರಿಯನ್ನ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ತಂದಿರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ತಿಳಿಸಿದ್ದಾರೆ.
ಕೆಎ 19 ಎಂಬಿ 8654, ಕೆಎ 11 ಟಿವೈ 990 ಎರಡು ಟ್ರಿಲ್ಲರ್ ಗಳಲ್ಲಿ ಮತ್ತು ಕೆಎ 1157990 ಕ್ರಮ ಸಂಖ್ಯೆಯ ಟ್ರಿಲ್ಲರ್ ನಲ್ಲಿ ಅಂತರಗಂಗೆ ನಿವಾಸಿ ಡಿಶ್ ಮಂಜು ವಿರುದ್ಧ ಅನೇಕ ವರ್ಷಗಳಿಂದ ಇಂತಹ ಅಕ್ರಮ ಅದಿರು ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಎಂಬ ದೂರನ್ನ ಸಂಘಟನೆಯವರು ನೀಡಿದ್ದರು.
ಸಂಘಟನೆಯ ದೂರಿನ ಆಧಾರದ ಮೇಲೆ ಡಿಶ್ ಮಂಜು ಮತ್ತು ಲಾರಿ ಮತ್ತು ಟ್ರ್ಯಾಕ್ಟರ್ ಚಾಲಕರ ವಿರುದ್ಧ ಕ್ರಮಕೈಗೊಳ್ಳುವಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣಿ ಮತ್ತು ಭೂವಿಜ್ಞಾನದ ಅಧಿಕಾರಿ ಜ್ಯೋತಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.