ಸುರಭಿ ರಜತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ಪೋಸ್ಟ್



ಸುದ್ದಿಲೈವ್/ಶಿವಮೊಗ್ಗ

ನಾಡಿನ ಮಠಮಾನ್ಯಗಳ ಶ್ರೇಷ್ಠ ಪರಂಪರೆ ಸೇವಾ ಚಟುವಟಿಕೆಗಳಿಗೆ ಪ್ರೇರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. 

ನಮ್ಮ ಶಿಕಾರಿಪುರದಲ್ಲಿ ನಿನ್ನೆ ಕೊಪ್ಪಳದ ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸುರಭಿ ಬಳಗದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅವರು ಫೇಶ್ ಬುಕ್ ನಲ್ಲಿ ಭಾಗಿಯಾಗಿದ್ದರು. 

ಶರಣ ಪರಂಪರೆಯ ಪುಣ್ಯಭೂಮಿಯಲ್ಲಿ ಸುರಭಿ ಬಳಗ ರಜತ ಮಹೋತ್ಸವ ಆಚರಿಸುತ್ತಿರುವುದು ಶಿಕಾರಿಪುರದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ, ಈ ಸುಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿರುವ ಶ್ರೀಗಳು ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಅಕ್ಷರಶಃ ತಮ್ಮನ್ನು ಸಮರ್ಪಿಸಿಕೊಂಡಂತಹ ಶ್ರೇಷ್ಠ ಸಂತ ಪರಮಪೂಜ್ಯ  ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದ ಮತ್ತಷ್ಟು ಸಮಾಜಮುಖಿ ಕಾರ್ಯಗಳಿಗೆ ಶಕ್ತಿ ನೀಡುವುದಾಗಿ ಹೆಮ್ಮೆಯಿಂದ ಶ್ಲಾಘಿಸಿದರು. 

ಈ ಸಂದರ್ಭದಲ್ಲಿ ಚನ್ನವೀರ ದೇಶ ಕೇಂದ್ರ ಮಹಾಸ್ವಾಮಿಜಿಗಳು, ಅಭಿನವ ಚನ್ನಬಸವ ಮಹಾಸ್ವಾಮೀಜಿಗಳು, ಸಂಸದ ಬಿ.ವೈರಾವೇಂದ್ರ, ಸುರಭಿ ಬಳಗದ ಅಧ್ಯಕ್ಷರಾದ  ಹೆಚ್.ಜಿ.ಮೃತ್ಯುಂಜಯ, ಪಿ ಜಯದೇವಯ್ಯ ಸೇರಿದಂತೆ ಸುರಭಿ ಬಳಗದ ಪ್ರಮುಖರು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close