ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಸಂಚಲನ ಮೂಡಿಸಿದ್ದಾರೆ. ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ಔಷಧ ಉಪಉಗ್ರಾಣ, ಮುಖ್ಯ ಉಗ್ರಾಣ ಮತ್ತು ಡಿಹೆಚ್ ಒ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಬಳ್ಳಾರಿಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ 12 ಜನ ಬಾಣಂತಿಯರ ಮರಣ ಹೊಂದಿದ ಬೆನ್ನಲ್ಲೇ ಸರ್ಕಾರದ ಆದೇಶದಮೇರೆಗೆ ರಿಂಗ್ಲಲ್ಯಾಕ್ಟೆಡ್ ಫ್ಲೂಯ್(ಆಡು ಭಾಷೆಯಲ್ಲಿ ಗ್ಲೂಕೋಸ್) ನ್ನ ರದ್ದುಗೊಳಿಸಿದೆ. ರದ್ದು ಆದೇಶ ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್ಪಿ ಅವರ ತಂಡ ಖುದ್ಧು ಮೂರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಆದೇಶ ಬಂದ ಹಿನ್ನಲೆಯಲ್ಲಿ ಮೆಗ್ಗಾನ್ ನಲ್ಲೂ ಸಹ ಔಷಧಗಳನ್ನ ಬಳಸದೆ ತೆಗೆದಿಡಲಾಗಿದೆ. 1,10,000 ರೂ. ಮೌಲ್ಯದ ರಿಂಗ್ಲಲ್ಯಾಕ್ಟೆಡ್ ಫ್ಲೂಯ್ ತರಿಸಲಾಗಿತ್ತು. ಅದರಲ್ಲಿ ಸರ್ಕಾರದ ಆದೇಶ ಬಂದ ನಂತರ 48 ಸಾವಿರ ರೂ ಪ್ಲೂಯ್ ಗಳನ್ನ ಬಳಸದೆ ತೆಗೆದಿಡಲಾಗಿದೆ ಎಂಬ ಸತ್ಯಾಂಶ ಲೋಕಾ ತಪಾಸಣೆಯಿಂದ ತಿಳಿದು ಬಂದಿದೆ.
ಅದೂ ಅಲ್ಲದೆ ವೆಸ್ಟ್ ಬೆಂಗಾಲ್ ನಿಂದ ಸಪ್ಲೆ ಆಗುವ ಮೆಡಿಸಿನ್ ಗಳು ಸಹ ಬಳಕೆ ಮಾಡದಂತೆ ಲೋಕಾ ಈ ವೇಳೆ ಮೆಗ್ಗಾನ್ ಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ತಪಾಸಣೆ ವೇಳೆ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ, ಇನ್ ಸ್ಪೆಕ್ಟರ್ ವೀರಬಸಪ್ಪ ಕುಸ್ಲಾಪುರ, ಹೆಡ್ ಕಾನ್ ಸ್ಟೇಬಲ್ ಸುರೇಂದ್ರ, ಮಂಜುನಾಥ್, ಪ್ರಶಾಂತ್, ಪ್ರದೀಪ್, ಗಂಗಾಧರ್ ಉಪಸ್ಥಿತರಿದ್ದರು.