ಸುದ್ದಿಲೈವ್/ಶಿವಮೊಗ್ಗ
ಯಾವಾಗಲೂ ಬಂದೋ ಬಸ್ತ್, ಕರ್ತವ್ಯದಲ್ಲಿಯೇ ಮುಳುಗಿದ್ದ ಜಿಲ್ಲಾ ಪೊಲೀಸರಿಗೆ ಸ್ಪರ್ಧೆ ರಿಲ್ಯಾಕ್ಸ್ ಹೌದು, ಫಿಟ್ ನೆಸ್ ಹೌದು! ಸದಾ ಕರ್ತವ್ಯದಲ್ಲಿ ಮುಳುಗೆಳುವ ಪೊಲೀಸರಿಗೆ ಇಂದಿನಿಂದ ಮೂರು ದಿನ ನಗರದ ಡಿಎಆರ್ ನಲ್ಲಿ ಕ್ರೀಡಾ ಕೂಟದಲ್ಲಿ ಮಿಂದೆದ್ದಾರೆ.
ಪೊಲೀಸ್ ಕವಾಯಿತು ಮೈದಾನದಲ್ಲಿ ಮೂರು ದಿನಗಳವರೆಗೆ ನಡೆಯುವ ಜಿಲ್ಲಾ ಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಡಿಸಿ ಇನ್ಚಾರ್ಜ್ ಆಗಿರುವ ಜಿಪಂ ಸಿಇಒ ಹೇಮಂತ್ ಚಾಲನೆ ನೀಡಿದರು. ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಿಲೇ ಓಟ,ಕಬ್ಬಡ್ಡಿ, ಹಗ್ಗಜಗ್ಗಾಟ, ಡಿಸ್ಕಸ್ ತ್ರೋ, ವಾಲಿಬಾಲ್, ಶಾರ್ಟ್ ಪುಟ್, ಲಾಂಗ್ ಜಂಪ್, ಜಾವಲಿನ್ ಥ್ರೋ, ನಡಿಗೆ ಸ್ಪರ್ಧೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಲ್ಲಿ ಚಾಲನೆ ನೀಡಲಾಯಿತು. ಮೂರು ದಿನಗಳಲ್ಲಿ 73 ಸ್ಪರ್ಧೆಗಳು ನಗಯಲಿದ್ದು 200 ಜನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಲಿದ್ದಾರೆ.
800 ಮೀಟರ್ ಓಟದಲ್ಲಿ ನ್ಯೂಟೌನ್ ನ ರಕ್ಷಿತ್ ಬಿ.ಎಂ ಪ್ರಥಮ, ಹಳೇ ನಗರ ಠಾಣೆಯ ಗೌತಮ್ ಬಿ.ಜೆ ದ್ವಿತೀಯ, ಡಿಎಆರ್ ದಯಾನಂದ ದ್ವಿತೀಯ ಸ್ಥಾನ ಪಡೆದಿದ್ದಾರೆ. ಲಾಂಗ್ ಜಂಪ್ ನಲ್ಲಿ ಶಿಕಾರಿಪುರದ ಶರತ್ ಪ್ರಥಮ, ಭದ್ರಾವತಿಯ ಗೌತಮ್ ದ್ವಿತೀಯ, ತೀರ್ಥಹಳ್ಳಿಯ ಗೌತಮ್ ತೃತೀಯ ಸ್ಥಾನ ಪಡೆದಿದ್ದಾರೆ.
ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಸಾಗರ ಉಪವಿಭಾಗದ ನರೇಂದ್ರ ಪ್ರಥಮ, ತೀರ್ಥಹಳ್ಳಿಯ ಗೌತಂ ದ್ವಿತೀಯ, ಶಿವಮೊಗ್ಗ ಡಿಎಆರ್ ನ ಹರೀಶ್,45 ವರ್ಷದಮಹಿಳಾ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಶ್ವೇತಾ ಪ್ರಥಮ, ರಿಪ್ಪನ್ ಪೇಟೆಯ ತ್ರಿವೇಣಿ, ದ್ವಿತೀಯ, ನ್ಯೂಟೌನ್ ನ ದಿವ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ.
ಲಾಂಗ್ ಜಂಪ್ ಸ್ಪರ್ಧೆಯಲ್ಲಿ (45 ವರ್ಷದ ಮಹಿಳೆಯರಿಗೆ) ವಿನೋಬ ನಗರ ಠಾಣೆಯ ದೀಪಾ ಪ್ರಥಮ, ಶಿವಮೊಗ್ಗ ಗ್ರಾಮಾಂತರ ಠಾಣೆಯ ಶ್ವೇತಾ ದ್ವಿತೀಯ ಹಾಗೂ ಭದ್ರಾವತಿ ನ್ಯೂಟೌನ್ ನ ದಿವ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ. ಭೋಜನದ ನಂತರ ಪಂದ್ಯಾವಳಿ ಮುಂದುವರೆದಿತ್ತು.
ಫುಟ್ ಬಾಲ್ ಫೆನಾಲ್ಟಿ ಶೂಟ್ ಔಟ್ ನಲ್ಲಿ ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರ್ಯಪ್ಪ, ಡಿವೈಎಸ್ಪಿ ಸುರೇಶ್, ಭದ್ರಾವತಿ ಡಿವೈಎಸ್ಪಿ ನಾಗರಾಜ್, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಸಹ ಭಾಗಿಯಾಗಿದ್ದರು. ಶೂಟ್ ಔಟ್ ನಲ್ಲಿ ಕಾರ್ಯಪ್ಪನವರ ಕಿಕ್ ಗಮನ ಸೆಳೆದಿತ್ತು