ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ



ಸುದ್ದಿಲೈವ್/ಶಿವಮೊಗ್ಗ

ಬೊಮ್ಮನ್ ಕಟ್ಟೆಯ ಗರಡಿ ಮನೆ ಬಳಿಯಿರುವ ತೋಟದಲ್ಲಿನ ಮಾವಿನ ಮರಕ್ಕೆ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೊಂದು ಆತ್ಮಹತ್ಯೆ ಪ್ರಕರಣವೆಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇಂದು ಬೆಳಿಗ್ಗೆ 6-30 ಕ್ಕೆ ಎಂದಿನಂತೆ ವಾಕಿಂಗ್ ಗೆ ತೆರಳಿದ್ದ ಮಹಿಳೆ ಹೇಮಾವತಿ (50) ತಮ್ಮ ತೋಟದಲ್ಲಿಯೇ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. 

ಬೊಮ್ಮನ್ ಕಟ್ಟೆಯಲ್ಲಿ ಪತಿ ದೇವೇಂದ್ರಪ್ಪ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಹೇಮಾವತಿ  ಪ್ರತಿನಿತ್ಯ ಮನೆಯ ಹಿಂಭಾಗದಲ್ಲಿರುವ ತೋಟಕ್ಕೆ ತೆರಳಿ ವಾಕಿಂಗ್ ಮಾಡಿಕೊಂಡು ವಾಪಾಸ್ ಆಗುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಸುಮಾರು 6-30 ಕ್ಕೆ ವಾಕಿಂಗ್ ಗೆ ಹೋದವರು ವಾಪಾಸಾಗಿರಲಿಲ್ಲ. 

ನಿಗದಿತ ಸಮಯಕ್ಕೆ ಮನೆಗೆ ವಾಪಾಸ್ ಆಗದ ಹೇಮಾವತಿಯನ್ನ ಹುಡುಕಿಕೊಂಡು ಹೋರಟ ಪತಿ ದೇವೇಂದ್ರಪ್ಪನವರಿಗೆ ಬೆಳಿಗ್ಗೆ 9-30 ಕ್ಕೆ ಅವರದೆ ತೋಟದ ಮಾವಿನ ಮರದಲ್ಲಿ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಂತರ ಅವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು‌. ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಸಾವು ಎಂದು ದಾಖಲಾಗಿದೆ. 

ಮೈಮೇಲೆ ದೇವರು ಬರುತ್ತಿತ್ತು

ಮೃತ ಮಹಿಳೆಯ ಮೈಮೇಲೆ ದೇವರು ಬರ್ತಿತ್ತು ಎಂಬ ವಿಚಾರವನ್ನ ಕುಟುಂಬ ಹಂಚಿಕೊಂಡಿದ್ದು ಯಾವಾಗ ಮೈಮೇಲೆ ದೇವರು ಬರ್ತಿತ್ತು ಆವಾಗ ಅವರಿಗೆ ಏನಾಗುತ್ತಿದೆ ಎಂಬ ಅರಿವು ಇಲ್ಲದಂತಾಗುತ್ತಿತ್ತು ಎಂಬುದನ್ನ ಹೇಮಾವತಿಯವರು ಕುಟುಂಬದೊಂದಿಗೆ ಹಂಚಿಕೊಂಡಿದ್ದರು. ಮಹಿಳೆಯ ಮೈಮೇಲೆ ದೇವರು ಬರುವುದು ನಿರಂತರವಾಗಿರಲಿಲ್ಲ. ಅಪರೂಪಕ್ಕೆ ಬರುತ್ತಿದ್ದಾದರೂ ದೇವರು ಬಂದಾಗ ಮಹಿಳೆಗೆ ಅರಿವಿರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close