ಸುದ್ದಿಲೈವ್/ಶಿವಮೊಗ್ಗ
ಗಾಂಧಿ ಬಜಾರ್ ನ ಎಲೆರೇವಣ್ಣನ ಕೇರೆಯಲ್ಲಿ ನಾಳೆ ಡಿ.11 ರಂದು ನಡೆಯಬೇಕಿದ್ದ ಕಂಬ ಬದಲಾವಣೆ ಕಾಮಗಾರಿಯನ್ನ ಮುಂದೂಡಲ್ಪಟ್ಟಿದೆ. ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದಿಂದ ರಜೆ ಘೋಷಿಸಿರುವ ಹಿನ್ನಲೆಯಲ್ಲಿ ಕಾಮಗಾರಿಯನ್ನ ಡಿ.12 ರಂದು ನಡೆಯಲಿದೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರದ ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ಡಿ.12 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್ ನ ಸುತ್ತ ಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಎಲೆರೇವಣ್ಣ ಕೇರಿ, ನಾಗಪ್ಪಕೇರಿ, ಅಶೋಕರಸ್ತೆ, ತುಳುಜಾ ಭವಾನಿ ರಸ್ತೆ, ಅನವೇರಪ್ಪ ಕೇರಿ, ಹಾವಿನಕೇರಿ, ಲಷ್ಕರ್ ಮೊಹಲ್ಲಾ, ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
