ಸುದ್ದಿಲೈವ್/ಶಿಕಾರಿಪುರ
ನಿನ್ನೆ ಶಿಕಾರಿಪುರದಲ್ಲಿ ನಡೆದಮರ್ಡರ್ ಪ್ರಕರಣ ಈಗ ಎಫ್ಐಆರ್ ಆಗಿದೆ. ಹೆಂಡತಿಯ ಮೇಲಿನ ಸಂಶಯಪಟ್ಟು ಪತಿ ಕಂದ್ಲಿಯಿಂದ ತಲೆಗೆ ಹೊಡೆದು ಸಾಯಿಸಿರುವುದಾಗಿ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿಕಾರಿಪುರದ ರಾಘವೇಂದ್ರ ಬಡಾವಣೆಯಲ್ಲಿ ವಾಸವಾಗಿದ್ದ ನಾಗರಾಜ್ ಮತ್ತು ರೇಣುಕಾರವರಿಗೆ ಮೂವರು ಮಕ್ಕಳಿದ್ದಾರೆ. ನಾಗರಾಜ್ ಪ್ಯಾಸೆಂಜರ್ ಆಟೋ ಚಲಾಯಿಸುತ್ತಿದ್ದರೆ ತಾಯಿ ರೇಣುಕಾ ಬಿಸಿಎಂ ಹಾಸ್ಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಪತ್ನಿ ರೇಣುಕಾ ಬಗ್ಗೆ ಅನುಮಾನಪಟ್ಟು ನಾಗರಾಜ್ ಜಗಳವಾಡುತ್ತಿದ್ದನು. ಸರಿಯಾದ ಸಮಯ ಸಿಗಲಿ ನಿನ್ನನ್ನ ಮತ್ತು ಸಂಬಂಧ ಇಟ್ಟುಕೊಂಡವನನ್ನ ಬಿಡುವುದಿಲ್ಲ ಎಂದು ಸಿಟ್ಟಿನಲ್ಲಿ ಹೇಳುತ್ತಿದ್ದನು ಎಂದು ಎಫ್ಐಆರ್ ದಾಖಲಾಗಿದೆ.
ನಿನ್ನೆ ಕೆಲಸದಿಂದ ಬಂದು ಮಲಗಿಕೊಂಡಿದ್ದ ವೇಳೆ ಬೆಳಗಿನ ಜಾವ ಪತಿ ಮತ್ತು ಪತ್ನಿಯರ ಜೊತೆ ಗಲಾಟೆ ಶುರುವಾಗಿದೆ. ನಾಗರಾಜ್ ಬೀಸಿದ ಕಂದ್ಲಿ ರೇಣುಕಾರ ಪ್ರಾಣ ತೆಗೆದಿದೆ. ಬೊಡಿಸಲು ಹೋದ ಮಗನಿಗೆ ಕಂದ್ಲಿ ರಕ್ತಕಾರುವಂತೆ ಮಾಡಿದೆ. ಈ ವೇಳೆ ಮಕ್ಕಳು ಕೂಗಿಕೊಂಡ ಪರಿಣಾಮ ಅಕ್ಕಪಕ್ಕದವರು ಓಡಿ ಬಂದಿದ್ದಾರೆ.
ತಕ್ಷಣವೇ ಮಗನನ್ನ ಸ್ಥಳೀಯರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.