ಸುದ್ದಿಲೈವ್/ಸೊರಬ
ಸಾಲಬಾದೆಗೆ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೊರಬ ತಾಲೂಕಿನ ಬನದಕೊಪ್ಪದಲ್ಲಿ ನಡೆದಿದೆ.
ಬನದಕೊಪ್ಪದ ನಿವಾಸಿ ನಾಗಾರಾಜ್ (40) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ನಾಗರಾಜ್ ವಿಷ ಸೇವಿಸಿದ್ದು ಅವರನ್ನ ಸೊರಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ್ ಸಾವುಕಂಡಿದ್ದಾರೆ. ಕೈಗಡ ಸಾಲದಿಂದ ನಾಗರಾಜ್ ವಿಷ ಸೇವಿಸಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಾಲ ಮತ್ತು ಬಡ್ಡಿಗೆ ನಾಗರಾಜ್ ಸಾವುಕಂಡಿದ್ದೇ ಆದರೆ 20 ದಿನಗಳಲ್ಲಿ ಜಿಲ್ಲೆಯಲ್ಲಿ ಇದು ಮೂರನೇ ಸಾವಾಗಿದೆ.
ನಗರಸಭೆ ಮಾಜಿ ಸದಸ್ಯ ಲಕ್ಷ್ಮಣ್ ಆರ್,ಬೊಮ್ಮನ್ ಕಟ್ಟೆಯ ಯುವಕ ಈಗ ನಾಗರಾಜ್ ಸಾವಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಬಡ್ಡಿ ವ್ಯವಹಾರದ ಬಗ್ಗೆ ದೂರು ದಾಖಲಾಗಿದೆ.