ಸುದ್ದಿಲೈವ್/ಶಿವಮೊಗ್ಗ
ನಗರದ ಬಿಹೆಚ್ ರಸ್ತೆಯಲ್ಲಿರುವ ಪೂರ್ವಿಕ ಮೊಬೈಲ್ ಶಾಪ್ ಎದುರು ನಿಲ್ಲಿಸಿದ್ದ ದ್ವಿಚಕ್ರವಾಹನವನ್ನ ಕಳುವು ಮಾಡಿರುವ ಘಟನೆ ಡಿ.3 ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ. ಕಳುವು ಮಾಡಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಬ್ಲಡ್ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಿರುವ ದಾವಣಗೆರೆ ಜಿಲ್ಲೆಯ ಚೀಲೂರು ಕಡದಕಟ್ಟೆ ನಿವಾಸಿ ಉಲ್ಲಾಸ್ ಎಂಬುವರು ಸ್ನೇಹಿತನನ್ನ ಭೇಟಿ ಮಾಡಲು ತಮ್ಮ ಕೆಎ 17 ಇಡಿ 5671 ಕ್ರಮ ಸಂಖ್ಯೆಯ ಹೀರೋ ಹೊಂಡಾ ಬೈಕ್ ನಲ್ಲಿ ಬಂದು ಪೂರ್ವಿಕಾ ಮೊಬೈಲ್ ಶಾಪ್ ಬಳಿ ನಿಲ್ಲಿಸಿದ್ದರು.
ಬೈಕ್ ಜಾಗಕ್ಕೆ ಬಂದ ಅಪರಿಚಿತ ಮೊದಲು ತನ್ನ ಬಳಿಯ ಕೀಯಿಂದ ಬೈಕ್ ಆನ್ ಮಾಡಿದ್ದಾನೆ. ತಕ್ಷಣವೇ ಹೆಡ್ ಲೈಟ್ ಆನ್ ಆಗಿದೆ. ನಂತರ ಕೀ ಆಫ್ ಮಾಡಿ ಸ್ವಲ್ಪ ಸಮಯದ ನಂತರ ವಾಪಾಸ್ ಬಂದು ಬೈಕ್ ಎತ್ತಿಕೊಂಡು ಹೋಗಿದ್ದಾನೆ.
ಸ್ನೇಹಿನನ್ನ ಮಾತನಾಡಿಸಿಕೊಂಡು ಬಂದ ಅಸಲಿ ಬೈಕ್ ಮಾಲೀಕ ವಾಪಾಸ್ ಊರಿಗೆ ಹೋಗಲು ಬೈಕ್ ನಿಲ್ಲಿಸಿದ್ದ ಜಾಗಕ್ಕೆ ಬಂದಾಗ ಬೈಕ್ ನಾಪತ್ತೆಯಾಗಿದೆ.ಆದರೆ ಬೈಕ್ ಕಳುವು ಮಾಡಿದ್ದ ಘಟನೆ ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾಗಿದೆ. ಅಲ್ಲೇ ಪಕ್ಕದ ನಾನ್ ವೆಜ್ ಹೋಟೆಲ್ ನಿಂದ ಹೊರಗೆ ಬಂದ ವ್ಯಕ್ತಿ ಉಲ್ಲಾಸ್ ನವರ ದ್ವಿಚಕ್ರವಾಹನವನ್ನ ಕಳುವು ಮಾಡಿರುವುದಾಗಿ ಹೇಳಲಾಗುತ್ತಿದೆ.
ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಬೇಕಿದೆ.