ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ವಿವಾಹಿತ ಮಹಿಳೆಯರು ನಾಪತ್ತೆಯಾಗಿದ್ದು ದೂರು ದಾಖಲಾದರೆ, ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಪತಿಯೋರ್ವ ಪತ್ನಿಯನ್ನ ಬಿಟ್ಟು ಹೋಗಿರುವುದಾಗಿ ಪತ್ನಿ ದೂರು ನೀಡಿದ್ದಾರೆ. ಮತ್ತೊಂದು ವಿಚಿತ್ರ ಪ್ರಕರಣದಲ್ಲಿ ಮದುವೆಯಾಗಿದ್ದರು ಪತಿಯ ವಿರುದ್ಧ ಪತ್ನಿ ಬಲತ್ಕಾರದ ಆರೋಪ ಮಾಡಿದ್ದಾರೆ.
ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಾಲಕ ವೃತ್ತಿಯಲ್ಲಿದ್ದ 24 ವಯಸ್ಸಿನ ವ್ಯಕ್ತಿ ಮನೆಯಲ್ಲಿ ಇಲ್ಲದ ವೇಳೆ ಪತ್ನಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ವಾಪಾಸ್ ಬಂದಿಲ್ಲವೆಂದು ದೂರು ನೀಡಿದ್ದಾರೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಅಳಿಯ ಮತ್ತು ಮಗಳಿಗೆ ಮಾತು ಬರೊಲ್ಲ ಮತ್ತು ಕಿವಿ ಕೇಳಿಸೋದಿಲ್ಲ. ಅಳಿಯನನ್ನ ಮಾವ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅದರಂತೆ ಕೂಲಿ ಕೆಲಸ ಮುಗಿಸಿಕೊಂಡು ಮನೆ ಬಂದ ಅಳಿಯನಿಗೆ ಶಾಕ್ ಆಗಿತ್ತು. ಮನೆಯಲ್ಲಿ ಪತ್ನಿ ಇಲ್ಲದ್ದನ್ನ ಕಂಡು ಅಳಿಯ ಮಾವನಿಗೆ ತಿಳಿಸಿದ್ದಾರೆ.
ಪತ್ನಿಗೆ ಬೇರೆ ಯುವಕನೋರ್ವ ಪರಿಚಯವಿದ್ದ ಕಾರಣ ಆತನ ಜೊತೆಯಲ್ಲಿ ಹೋಗಿರಬಹುದು ಎಂದು ದೂರು ನೀಡಲಾಗಿದೆ. ಅದರಂತೆ ಇದೇ ಭದ್ರಾವತಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿರುವ ವಿವಾಹಿತ ಮಹಿಳೆ ಪತಿ ನಾಪತ್ತೆಯ ಕುರಿತು ದೂರು ದಾಖಲಿಸಿದ್ದಾರೆ.
ಕೆಎಸ್ಆರ್ ಟಿಸಿ ಭದ್ರಾವತಿ ಘಟಕದಲ್ಲಿ ಚಾಲಕ ಕಂ ನಿರ್ವಾಹಕನಾಗಿದ್ದ ವ್ಯಕ್ತಿ ಮಾನಸಿಕ ರೋಗಿಯಾಗಿದ್ದರಿಂದ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಸಂಸ್ಥೆಯಿಂದ ವಜಾವಾಗಿದ್ದರು. ಇದರಹಿಂದೆಯೂ ಎರಡು ಬಾರಿ ಮನೆಬಿಟ್ಟು ಹೋಗಿದ್ದ ವ್ಯಕ್ತಿ ವಾಪಾಸಾಗಿದ್ದರು.
ನ.30 ರಂದು ಆಸ್ಪತ್ರೆಯಲ್ಲಿ ನೈಟ್ ಡ್ಯೂಟಿ ಮುಗಿಸಿಕೊಂಡು ಬಂದ ಪತ್ನಿಗೆ ಶಾಕ್ ಆಗಿತ್ತು. ಅನೇಕ ಕಡೆ ಹುಡುಕಿದರೂ ಪತ್ತೆಯಾಗದ ಪತಿಯ ಬಗ್ಗೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇಷ್ಟಪಟ್ಟು ವಿವಾಹವಾಗಿದ್ದರೂ ಅಪ್ರಾಪ್ತರಾಗಿದ್ದಾಗ ಗರ್ಭಿಣಿ ಮಾಡಿರುವುದಾಗಿ ಪತ್ನಿ ಪತಿಯ ವಿರುದ್ಧವೇ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.