ಸುದ್ದಿಲೈವ್/ಶಿವಮೊಗ್ಗ
ಹೊಳೆಬೆನವಳ್ಳಿ ಗ್ರಾಮಪಂಚಾಯಿತಿಯ ಪುರಲೆ ಗ್ರಾಮದಲ್ಲಿರುವ ಕಟ್ಟಡ, ನಿವೇಶನ ಮತ್ತು ವಾಣಿಜ್ಯ ಸಂಕಿರ್ಣಗಳು ಶಿವಮೊಗ್ಗ ಮಹಾನಗರ ಪಾಲಿಕೆ ಇ-ಸ್ವತ್ತಿಗೆ ಬರಲಿದ್ದು ಈ ಕುರಿತು ಬಿಜೆಪಿ ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ವ್ಯಾಪ್ತಿಗೆ ಪುರಲೆ ಗ್ರಾಮ ಬರುವುದರಿಂದ ಪಾಲಿಕೆ ನಿಯಮದಂತೆ ಕಂದಾಯ, ನೀರಿನ ಬಿಲ್ ಗಳನ್ನ ಕಟ್ಟಿಕೊಂಡು ಬರುತ್ತಿದ್ದೇವೆ. ಇ-ಸ್ವತ್ತು ನೀಡಲು ಪಾಲಿಕೆ ಅಧಿಕಾರಿಗಳು ನಿಮ್ಮದು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿತ್ತಿದ್ದು ಗೊಂದಲಗಳನ್ನ ಮೂಡಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇ-ಸ್ವತ್ತು ಗೊಂದಲವಾಗಿರುವುದರಿಂದ ಬ್ಯಾಂಕ್ ಸಾಲಗಳು ಸಿಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ ಮತ್ತು ಇನ್ನಿತರ ವಹಿವಾಟುಗಳು ಸ್ಥಗಿತಗೊಳ್ಳುತ್ತಿದೆ. ಹಾಗಾಗಿ ಪುರಲೆ ಗ್ರಾಮದ ಈ ಗೊಂದಲಗಳನ್ನ ಸರಿಪಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.
40 ಸಾವಿರ ಇ-ಸ್ವತ್ತು-ಆಯುಕ್ತೆ
ನ.7 ರಿಂದ ಸರ್ಕಾರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೊಳಿಸಿದ ಬೆನ್ನಲ್ಲೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಿವೇಶನ ನೋಂದಣಿ ಪ್ರಕ್ರಿಯಿ ಸ್ಥಗಿತಗೊಂಡಿತು. ಸಾರ್ವಜನಿಕರಿಗೆ ಇ-ಸ್ವತ್ತು ಇಲ್ಲದ ಕಾರಣ ಬ್ಯಾಂಕ್ ನಲ್ಲಿ ಮಾರ್ಟಗೇಜ್ ಸಾಲ ಸ್ಥಗಿತಗೊಂಡಿತ್ತು.
ಆದರೆ ಈ ಕುರಿತು ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ಮನವಿ ಕೊಟ್ಟಾಗ ಪಾಲಿಕೆ ಆಯುಕ್ತರು ಒಂದು ತಿಂಗಳಲ್ಲಿ 40 ಸಾವಿರ ಖಾತೆಗಳು ಇ-ಸ್ವತ್ತು ಆಗಿದೆ ಎಂದರು.
ಮೂರು ವಿಭಾಗೀಯ ಕಚೇರಿಗಳು ಆರಂಭ
ಇ-ಸ್ವತ್ತು ಗೊಂದಲಗಳು ಹೆಚ್ಚಾದ ಬೆನ್ನಲ್ಲೇ ಪಾಲಿಕೆ ವತಿಯಿಂದ ಮೂರು ಕಡೆ ಪಾಲಿಕೆಯ ವಿಭಾಗೀಯ ಕಚೇರಿಗಳು ಆರಂಭಮಾಡಲು ನಿರ್ಧರಿಸಿದ್ದು ಇದನ್ನ 15 ದಿನಗಳಲ್ಲಿ ಶುರು ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ ಆಯುಕ್ತರು ಯಾರಿಗೆ ತ್ವರಿತವಾಗಿ ಮಾರ್ಟಗೇಜ್ ಸಾಲ ಬೇಕಾಗಿದೆಯೋ ಅವರು ಬಂದು ಇ-ಸ್ವತ್ತು ಮಾಡಿಸಿಕೊಳ್ಳಿ. ಉಳಿದವರು ನಿಧಾನವಾಗಿ ಮಾಡಿಸಿಕೊಳ್ಳಲು ಮನವಿ ಮಾಡಿದ್ದಾರೆ.
ಮನವಿ ನೀಡುವ ಸಂಧರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಮಹೇಶ್ವರಪ್ಪ, ಬಿಜೆಪಿ ನಗರ ಘಟಕ ಉಪಾಧ್ಯಕ್ಷ ಧೀನ್ ದಯಾಳು, ಪಾಲಿಜೆ ಸದಸ್ಯ ಪ್ರಭು, ಕಿರಣ್ ಮೊದಲಾದವರು ಉಪಸ್ಥಿತರಿದ್ದರು.