ಸುದ್ದಿಲೈವ್/ಶಿವಮೊಗ್ಗ
ಮದುವೆ ಆರತಕ್ಷತಾ ಸಂದರ್ಭದಲ್ಲಿ ಉಡುಗೊರೆಯ ಬ್ಯಾಗ್ ಕಳುವಾಗಿದೆ. ಸವಳಂಗ ರಸ್ತೆಯಲ್ಲಿರುವ ಕನ್ವೆಷನಲ್ ಹಾಲ್ ನಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥದ ಸಮಾರಂಭದಲ್ಲಿ ಉಡುಗೊರೆಯ ಬ್ಯಾಗ್ ಕಳುವಾಗಿದೆ.
ಇತ್ತೀಚೆಗೆ ಸವಳಂಗ ರಸ್ತೆಯಲ್ಲಿರುವ ಮದುವೆ ಮಂಟಪದಲ್ಲಿ ಪುರುಲೆ ಕುಟುಂಬಸ್ಥರೊಬ್ಬರ ಮದುವೆ ಆರತಕ್ಷತೆ ನಡೆಯುತ್ತಿದೆ. ಆ ವೇಳೆ ಒಂದು ಲಕ್ಷದ ರೂ. ಹಣವುಳ್ಳ ಉಡುಗೊರೆಯ ಹಣವನ್ನ ಸಂಗ್ರಹಿಸಿದ್ದ ಬ್ಯಾಗ್ ಕಳುವಾಗಿದೆ.
ಈ ಕಳಯವಿನ ದೃಶ್ಯ ಕಲ್ಯಾಣ ಮಂಟಪದಲ್ಲಿ ಸಿಸಿಟಿವಿ ಫೂಟೇಜ್ ನಲ್ಲಿ ಸೆರೆಯಾಗಿದೆ. ಅತ್ಯಂತ ದುರಾದೃಷ್ಟಕರ ವಿಷಯವೇನೆಂದರೆ ಅಪರಿಚಿತ ಬಾಲಕನೋರ್ವ ಈ ಕಳುವಿನ ಘಟನೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.
ಇಂತಹ ಕಾನೂನು ಬಾಹಿರ ಪ್ರಕರಣಗಳಲ್ಲಿ ಬಾಲಾಪರಾಧಿಗಳನ್ನ ಬಳಸಿಕೊಂಡಿರುವುದು ಆತಂಕ ಮೂಡಿಸಿದೆ. ಶಿವಮೊಗ್ಗ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.