Ksrtc ಬಸ್ ನಿಲ್ದಾಣದಲ್ಲಿ ಮದುವೆಗೆ ಬಂದ ಮಹಿಳೆಯ ಚಿನ್ನಾಭರಣ ಕಳುವು


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚಿನ್ನಾಭರಣದ ಕಳ್ಳತನ ಮುಂದುವರೆದಿದೆ. ಸಾಗರದಿಂದ ಬಂದು ಹರಿಹರ ಬಸ್ ಹತ್ತಿಕೊಢು ಪ್ರಯಾಣಿಸಲು ಶಿವಮೊಗ್ಗಕ್ಕೆ ಬಂದ ಮಹಿಳೆ 15 ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದಾರೆ. 

ಹರಿಹರ ತಾಲೂಕಿನ ಮಲೆಬೆನ್ನೂರಿನ ಕೊಕನೂರು ಗ್ರಾಮದಿಂದ ಸಾಗರದಲ್ಲಿ ನಡೆದ ಮದುವೆಗೆ ಬಂದಿದ್ದ ಕುಟುಂಬ ಮದುವೆ ಮುಗಿಸಿಕೊಂಡು ವಾಪಸ್ ಶಿವಮೊಗ್ಗಕ್ಕೆ ಖಾಸಗಿ ಬಸ್ ನಲ್ಲಿ  ಬಂದು ಹರಿಹರಕ್ಕೆ ತೆರಳಲು ಕೆಎಸ್ಆರ್ ಟಿ ಬಸ್ ಹಿಡಿಯಲು ಮುಂದಾಗಿತ್ತು. ಎಂದಿನಂತೆ ಶಿವಮೊಗ್ಗದಲ್ಲಿ ಬಸ್ ನಲ್ಲಿ ಪ್ರಯಾಣಿಸುವರ ಸಂಖ್ಯೆ ಹೆಚ್ಚಾಗಿದ್ದರಿಂದ ಬಸ್ ರಶ್ ಆಗಿತ್ತು. 

ಬಸ್ ರಶ್ ಆಗಿದ್ದರು ಕುಟುಂಬ ಬಸ್ ನ ಸೀಟ್ ಹಿಡಿದುಕೊಂಡು ಕುಳಿತಿದ್ದು ಇದರಲ್ಲಿದ್ದ 30 ವರ್ಷದ ಮಹಿಳೆಯ ವ್ಯಾನಿಟಿ ಬ್ಯಾಗ್ ನ ಜಿಪ್ ಒಪನ್ ಆಗಿತ್ತು. ಯಾವಾಗ ಬ್ಯಾಗ್ ನ ಜಿಪ್ ಒಪನ್‌ಆಗಿದ್ದನ್ನ ಗಮನಿಸಿ ಚೆಕ್ ಮಾಡಿದ ಮಹಿಳೆಗೆ ನಿರಾಸೆ ಮೂಡಿತ್ತು. 

ಬ್ಯಾಗ್ ನಲ್ಲಿದ್ದ 15 ಗ್ರಾಗ್ ನ ನೆಕ್ಲೆಸ್ ಕಳುವಾಗಿದ್ದು, ಸುಮಾರು 1,10,000 ರೂ. ಮೌಲ್ಯದ ಬಂಗಾರದ ನೆಕ್ಲೆಸ್ ಕಳೆದುಕೊಂಡಿರುವುದು ಗೊತ್ತಾಗಿದೆ. ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close