ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಬೊಮ್ಮನ್ ಕಟ್ಟೆಯಲ್ಲಿ ರಾಜೇಶ್ಶೆಟ್ಟಿ ಯಾನೆ ಕಪ್ಡ ರಾಜೇಶ್ ನ ಕೊಲೆಗೆ ಸಂಬಂಧ ಪಟ್ಟಹಾಗೆ ಎಫ್ಐಆರ್ ದಾಖಲಾಗಿದ್ದು ಎಫ್ಐಆರ್ ಕುರಿತಂತೆ ನಾಲ್ವರನ್ನ ಬಂಧಿಸಲಾಗಿದೆ. ನಾಲ್ವರ ಸ್ಥಳಮಹಜರನ್ನ ವಿನೋಬ ನಗರ ಪೊಲೀಸರು ಇಂದು ಮಧ್ಯಾಹ್ನ ಮುಗಿಸಿದ್ದಾರೆ.
ಗಣೇಶ್, ಕಿರಣ್ ಗೌಡ, ನಾಗರಾಜ್ ಅಲಿಯಾಸ್ ಚಿಟ್ಟೆನಾಗ, ವೆಂಕಟೇಶ್ ರನ್ನ ಬಂಧಿಸಿದ್ದು ವಿನೋಬ ನಗರ ಪೊಲೀಸರು ಇಂದು ಅವರ ಸ್ಥಳ ಮಹಜರ್ ಮುಗಿಸಿದ್ದಾರೆ. ಆದರೆ ಕರಿಯ ವಿನಯ್ ಮತ್ತು ಡಿಂಗಾ ಯಾನೆ ದೀಪುರನ್ನ ಇನ್ನೂ ಬಂಧಿಸಬೇಕಿದೆ.
ರಾಜೇಶ್(41) 20 ವರ್ಷಗಳ ಹಿಂದೆ ಮದುವೆ ಕೂಡ ಆಗಿದ್ದ, ಆದರೆ ವೈವಾಹಿಕ ಜೀವನದಲ್ಲಿ ಸರಿ ಬಾರದ ಹಿನ್ನಲೆಯಲ್ಲಿ ಒಂದು ವರ್ಷದ ಹಿಂದಷ್ಟೆ ಈತನ ಪತ್ನಿ ಮತ್ತು ಮಗ ದೂರವಾಗಿದ್ದರು. ಆದರೆ ಆಶ್ರಯ ಮನೆಯಲ್ಲಿ ತಂದೆ ತಾಯಿಯಜೊತೆ ರಾಜೇಶ್ ವಾಸವಾಗಿದ್ದ. ಇತ್ತೀಚೆಗೆ ರಾಜೇಶ್ ರಿಯಲ್ ಎಸ್ಟೇಟ್ ನಲ್ಲೂ ಗುರಿತಿಸಿಕೊಂಡಿದ್ದ.
ಈಗ್ಗೆ ಮೂರುವರೆ ತಿಂಗಳ ಹಿಂದೆ ಬೊಮ್ಮನಕಟ್ಟೆಯಲ್ಲಿ ಬಿಜೆಪಿಯ ಪುರುಷೋತ್ತಮ ಎಂಬುವವರು ಮೃತ ಪಟ್ಟಿದ್ದು, ಅವರ ಶವ ಸಂಸ್ಕಾರಕ್ಕೆ ರಾಜೇಶ್ ಶೆಟ್ಟಿ, ಕರಿಯ @ ವಿನಯ, ಕಿರಣ, ಸಂದೀಪ, ಸಂದೇಶ, ಹೇಮಂತ, ರಮೇಶ್ ರೆಡ್ಡಿ ರವರುಗಳು ಹೋಗಿದ್ದು ಅಲ್ಲಿ ಮದ್ಯಪಾನ ಮಾಡಿಕೊಂಡು ಮಾತು ಮಾತಲಿ ಕರಿಯ ವಿನಯ್ ಮತ್ತು ರಾಜೇಶ್ ಶೆಟ್ಟಿ ನಡುವೆ ಜಗಳ ಉಂಟಾಗಿತ್ತು.
![]() |
ಮಹಜರ್ ಮಾಡಿದ ಸ್ಥಳ |
ಗಲಾಟೆಯಾದ ರಾತ್ರಿ ರಾಜೇಶ್ ಶೆಟ್ಟಿ ತನ್ನ ಸ್ನೇಹಿತನ ಮನೆಗೆ ಬಂದು ಕರಿಯ ವಿನಯ್ ಹೊಡೆದಿದ್ದಾನೆ. ನೀನು ಬಾ ಎಂದು ಕರೆದುಕೊಂಡು ಹೋಗಿ ವಿನಯ್ ಗೆ ಕೈಬೆರಳು ತುಂಡಾಗುವಂತೆ ಹೊಡೆದಿದ್ದ. ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಹಾಫ್ ಮರ್ಡರ್ ಪ್ರಕರಣ ದಾಖಲಾಗಿತ್ತು. ಇತ್ತ ವಿನಯ್ ನ ಬೆರಳು ಮುರಿದಿದ್ದ ರಾಜೇಶ್ ಮತ್ತು ಸ್ನೇಹಿತ ಊರು ಬಿಟ್ಟಿದ್ದರು.
ನಿನ್ನೆ ಮಧ್ಯಾಹ್ನ 12-45 ರ ಸುಮಾರಿಗೆ ಬೊಮ್ಮನ್ ಕಟ್ಟೆ ಮುಖ್ಯರಸ್ತೆಯಲ್ಲಿರುವ ಅರ್ಜುನ್ ನ ಗ್ಯಾರೇಜ್ ಅಂಗಡಿಯಲ್ಲಿ ರಿಪೇರಿಗೆ ಬಿಟ್ಟು ಹೋಗಿದ್ದ ಬೈಕ್ ನ್ನ ವಾಪಾಸ್ ಪಡೆಯಲು ಬಂದಿದ್ದ ರಾಜೇಶ್ ನ ಮೇಲೆ ಕರಿಯ ವಿನಯ್ ಗ್ಯಾಂಗ್ ಮಾರಕಾಸ್ತಗಳಿಂದ ದಾಳಿ ನಡೆಸಿದೆ. ಆದರೆ ಇದರಲ್ಲಿ ನಾಲ್ವರನ್ನ ಬಂಧಿಸಲಾಗಿದೆ. ಬೊಮ್ಮನ್ ಕಟ್ಟೆಯ ಚಾನೆಲ್ ನಲ್ಲಿ ರಾಜೇಶ್ ಶೆಟ್ಟಿ ಕೊಲೆಗೆ ಬಳಸಿದ ಆಯುಧವನ್ನ ಎಸೆದಿದ್ದರಿಂದ ಪೊಲೀಸರು ಸ್ಥಳ ಮಹಜರ್ ಮಾಡಿದ್ದಾರೆ.