ಬಾರಂದೂರಿನ ಬಳಿ ಮೃತ ಗಂಡು ಚಿರತೆ ಪತ್ತೆ

A dead body of a male leopard was found under the Bhadra river bridge in Barandur of Bhadravati this morning. There are many suspicions about the discovery of this dead body.


ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಬಾರಂದೂರಿನ‌ ಭದ್ರ ನದಿಯ ಸೇತುವೆ ಕೆಳಗೆ ಇಂದು ಬೆಳಗ್ಗಿನ ಜಾವ ಗಂಡು ಚಿರತೆಯ ಮೃತ ದೇಹ ಪತ್ತೆಯಾಗಿದೆ. ಈ ಮೃತ ದೇಹ ಪತ್ತೆಗೆ ಹಲವು ಶಂಕೆ ವ್ಯಕ್ತವಾಗಿದೆ.


ಭದ್ರಾವತಿಯ ಬಾರಂದೂರಿನ ಭದ್ರಾನದಿಯ ಸೇತುವೆ ಬಳಿ ಎರಡು ವರೆ ವರ್ಷದ ಗಂಡು ಚಿರತೆ ಪತ್ತೆಯಾಗಿದ್ದು ಹಂದಿಗೊಡೆಯುವ ಬರ್ಜಿಯ ಏಟಿಗೆ ಚಿರತೆ ಜೀವ ಬಿಟ್ಟಿರುವುದಾಗಿ ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. 


ಮೊದಲಿಗೆ ಗುಂಡು ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಶವೋತ್ತರ ಪರೀಕ್ಷೆಯ ನಂತರ ಈ ಘಟನೆ ಬರ್ಜಿಯಿಂದ ಹೊಡೆದು ಸಾಯಿಸಿರುವುದಾಗಿ ತಿಳಿಸಿದರು. ಘಟನೆ ಬೆಳಗ್ಗಿನ ಜಾವ ನಡೆದಿದೆ. ಕಾಡು ಪ್ರಾಣಿಗಳ ಭೇಟೆ ನಡೆದಾಗ ಈ ಘಟನೆಯ ಶಂಕೆ ವ್ಯಕ್ತವಾಗುತ್ತಿದೆ. ಇದು ತನಿಖೆಯಿಂದ ಬಹಿರಂಗಗೊಳ್ಳಬೇಕು ಎಂದಿದ್ದಾರೆ. 


ಬೆಳಿಗ್ಗೆ ಮೀನು ಹಿಡಿಯುವರ ನದಿಗೆ ಇಳಿದಾಗ ಈ ಚಿರತೆಯ ಮೃತ ದೇಹಪತ್ತೆಯಾಗಿದೆ. ಹೊರಗಡೆ ಸಾಯಿಸಿ ಈ ಜಾಗದಲ್ಲಿ ಹಾಕಿರುವ ಶಂಕೆಯೂ ವ್ಯಕ್ತವಾಗಿದೆ. 

ತರೀಕೆರೆಯಿಂದ ಭದ್ರಾವತಿಯವರೆಗೆ ಸಿಸಿ ಟಿವಿ ಫೂಟೇಜ್ ತಪಾಸಣೆ ನಡೆಸಲಾಗಿದೆ. ಈ ಭಾಗದಲ್ಲಿ ಎಲ್ಲೂ ಚಿರತೆ ಪತ್ತೆಯಾಗಿಲ್ಲ. ಚಿರತೆ ಹಾವಳಿ ಬಗ್ಗೆ ಈ ಭಾಗದ ಗ್ರಾಮಸ್ಥರು ಸಹ ಇಲಾಖೆಗೆ ದೂರು ನೀಡಿಲ್ಲ. ಹಾಗಾಗಿ ಈ ಚಿರತೆಯನ್ನ ಸಾಯಿಸಿ ಇಲ್ಲಿಗೆ ಬಿಸಾಕಿರುವ ಬಗ್ಗೆ ಶಂಕೆಯಿದೆ

ಡಿಸಿಎಫ್ ಆಶೀಶ್ ಭದ್ರಾವತಿ ವಲಯ ಅರಣ್ಯ ಇಲಾಖೆ

------------------------------------------------------------- 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close